ಕಾರ್ಕಳ: ಪ್ರಕೃತಿ ಕಾಲೇಜಿಗೆ ಮತ್ತೊಂದು ಕರಾಟೆ ಪ್ರಶಸ್ತಿ

Update: 2019-03-15 17:34 GMT

ಕಾರ್ಕಳ: ಉಡುಪಿ ಕಟಪಾಡಿಯಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಾರ್ಕಳ ಕಾಂತಾವರದ ಪ್ರಕೃತಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ಆಮಿಶ್ ಅಹ್ಮದ್, 21ವರ್ಷ ವಯೋಮಿತಿಯ 55ಕೆ.ಜಿ. ಪುರುಷರ ವೈಯಕ್ತಿಕ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಗಳಿಸಿದರು.

ಇವರು ಪ್ರಕೃತಿ ವಿದ್ಯಾಸಂಸ್ಥೆಯ ಪ್ರೋತ್ಸಾಹದಿಂದ ಕಳೆದ ಕೆಲವು ವರ್ಷಗಳಿಂದ ದೇಶವಿದೇಶಗಳಲ್ಲಿ ನಡೆದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News