ಸಹಕಾರಿ ತರಬೇತಿ ಡಿಪ್ಲೋಮಾ ಪರೀಕ್ಷೆ: ಬಂಟ್ವಾಳದ ರಮ್ಯಾ ಗಾಣಿಗ ಪ್ರಥಮ ರ್ಯಾಂಕ್

Update: 2019-03-15 17:58 GMT

ಬಂಟ್ವಾಳ: ಮೂಡುಬಿದ್ರೆ ಡಿಪ್ಲೋಮಾ ಇನ್ ಕೋ-ಅಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ ಇದರ 2018ನೇ ಸಾಲಿನ ಅಂತಿಮ ಪರೀಕ್ಷೆಯಲ್ಲಿ ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ಜನತಾಗ್ರಹ ನಿವಾಸಿ ರಮ್ಯಾ ಗಾಣಿಗ ಇವರಿಗೆ ಪ್ರಥಮ ರ್ಯಾಂಕ್ ದೊರೆತಿದೆ.

ಈಕೆ ಬಂಟ್ವಾಳ ಎಸ್‍ವಿಎಸ್ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದು, ಇಲ್ಲಿನ ನರಿಕೊಂಬು ಗ್ರಾಮದ ಜನತಾಗ್ರಹ ನಿವಾಸಿ ಕೂಸಪ್ಪ ಗಾಣಿಗ ಮತ್ತು ದೇವಕಿ ಗಾಣಿಗ ದಂಪತಿ ಪುತ್ರಿ.

ಕಳೆದ ಸಾಲಿನಲ್ಲಿ ಮೂಡುಬಿದ್ರೆ ಸಂಸ್ಥೆಯಿಂದ ಒಟ್ಟು 62 ಮಂದಿ ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ನೋಲನ್ ಫೆರ್ನಾಂಡಿಸ್‍ಗೆ 3ನೇ ರ್ಯಾಂಕ್, ನಿಖಿಲ್-8ನೇ ರ್ಯಾಂಕ್, ದೀಕ್ಷಿತಾ-9ನೇ ರ್ಯಾಂಕ್ ದೊರೆತಿದೆ. ರಾಜ್ಯದಲ್ಲಿ ಒಟ್ಟು 8 ಸಹಕಾರಿ ಡಿಪ್ಲೋಮಾ ತರಬೇತಿ ಸಂಸ್ಥೆಗಳ ಪೈಕಿ 11 ರ್ಯಾಂಕಿ ನಲ್ಲಿ ಮೂಡುಬಿದ್ರೆಗೆ 4 ರ್ಯಾಂಕ್ ದೊರೆತಿರುವುದು ಸಂತಸ ತಂದಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಶ್ಯಾಮಲಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News