ಸಂಸದ ನಳಿನ್ ನಂತರ ಸೇನೆಯ ಸಾಹಸವನ್ನು ಮತಯಾಚನೆಗೆ ಬಳಸಿದ ಶೋಭಾ ಕರಂದ್ಲಾಜೆ

Update: 2019-03-16 07:47 GMT

ಉಡುಪಿ, ಮಾ.16: “ರಾತ್ರಿ 3 ಗಂಟೆಗೆ ಶತ್ರು ದೇಶಕ್ಕೆ ನುಗ್ಗಿ ಹೊಡೆಯುವಂತೆ ಆದೇಶ ನೀಡುವವರಿಗೆ ಮತ ಹಾಕಬೇಕೇ ಹೊರತು ರಾತ್ರಿ 3 ಗಂಟೆಗೆ ಉಗ್ರರಿಗಾಗಿ ಸುಪ್ರೀಂ ಕೋರ್ಟ್ ಬಾಗಿಲು ತೆರೆಸುವವರಿಗಲ್ಲ... #ಮೋದಿ ಮತ್ತೊಮ್ಮೆ'' ಎಂದು ಸಂಸದ ನಳಿನ್ ಕುಮಾರ್ ಕಟೀಲ್ ವಿವಾದಾಸ್ಪದ ಟ್ವೀಟ್ ಮಾಡಿದ ಬೆನ್ನಲ್ಲೇ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ  ಚುನಾವಣಾ ಪ್ರಚಾರಕ್ಕಾಗಿ ಸರ್ಜಿಕಲ್ ದಾಳಿ ಹಾಗೂ ಬಾಲಕೋಟ್ ವಾಯು ದಾಳಿ ವಿಚಾರಗಳನ್ನು ಬಳಸಿಕೊಂಡಿದ್ದಾರೆ.

ಶೋಭಾ ತಮ್ಮ ಟ್ವೀಟ್ ನಲ್ಲಿ ಹೀಗೆ ಬರೆದಿದ್ದಾರೆ ''26/11 ನಂತರ: #ಕಾಂಗ್ರೆಸ್ ಪಾಕ್ ಗೆ 5 ಮಿಲಿಯನ್ ಸಹಾಯ ನೀಡಿತ್ತು, ಪಠಾಣ್ ಕೋಟ್ ರೂವಾರಿಯನ್ನು ಉತ್ತಮ ಬಾಂಧವ್ಯದ ದೃಷ್ಟಿಯಿಂದ ಬಿಡುಗಡೆಗೊಳಿಸಿತ್ತು. ಉರಿ ಹಾಗೂ ಪುಲ್ವಾಮ ದಾಳಿಯ ನಂತರ : ಪ್ರಧಾನಿ ನರೇಂದ್ರ ಮೋದಿ ಸರ್ಜಿಕಲ್ ಸ್ಟ್ರೈಕ್ ಮುಖಾಂತರ ಉಗ್ರ ಶಿಬಿರಗಳನ್ನು ನಾಶಗೊಳಿಸಿದ್ದಾರೆ. ನಿಮಗೆ 2019ರಲ್ಲಿ ಯಾವ ತರಹದ ಸರಕಾರ ಬೇಕು ? #ನಮೋ ಅಗೈನ್''.

ಸೇನಾ ಪಡೆಗಳನ್ನು ರಾಜಕೀಯ ಪ್ರಚಾರಗಳಿಂದ ದೂರವಿರಿಸುವಂತೆ ಹಾಗೂ ಸೇನಾ ಪಡೆಗಳ ಹಾಗೂ ಯೋಧರ ಚಿತ್ರಗಳನ್ನು ಪ್ರಚಾರ ಕಾರ್ಯದಲ್ಲಿ ಬಳಸದಂತೆ ಚುನಾವಣಾ ಆಯೋಗ ಇತ್ತೀಚೆಗೆ ರಾಜಕೀಯ ಪಕ್ಷಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೆ ದ.ಕ. ಮತ್ತು ಉಡುಪಿ ಸಂಸದರು ಈ ಸೂಚನೆಗಳನ್ನು ನಿರ್ಲಕ್ಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News