ನಾಟೆಕಲ್: ಮಸೀದಿಯ ವಕ್ಫ್ ಕಾರ್ಯಕ್ರಮ

Update: 2019-03-16 12:25 GMT

ಉಳ್ಳಾಲ, ಮಾ.16: ಮಸೀದಿ ನಿರ್ಮಾಣಕ್ಕಾಗಿ ನೆರವು ನೀಡುವಂತಹದ್ದು ಪುಣ್ಯ ಕಾರ್ಯ, ಮಸೀದಿಯಲ್ಲಿ ಧಾರ್ಮಿಕ ಇತಿ ಮಿತಿಯೊಳಗೆ ಸಲ್ಲಿಸಬೇಕಾದ ಆರಾಧನಾ ಕ್ರಮಗಳನ್ನು ಮಹಲ್ಲಿನ ಪ್ರತಿಯೊಬ್ಬರೂ ಚಾಚೂ ತಪ್ಪದೆ ಪಾಲಿಸಬೇಕು ಎಂದು ಸಯ್ಯದ್ ಜಲಾಲ್ ತಂಙಳ್ ಮಳ್ಹರ್ ಪೊಸೋಟು ಅಭಿಪ್ರಾಯಪಟ್ಟರು.

ನಾಟೆಕಲ್ ವಿಜಯನಗರದಲ್ಲಿ ಸಬೀಲುಲ್ ರಶಾದ್ ಇಸ್ಲಾಮಿಕ್ ಟ್ರಸ್ಟಿನ ಅಧೀನದಲ್ಲಿ ನಿರ್ಮಿಸಲಾದ ಮಸೀದಿಯ ವಕ್ಫ್ ಕಾರ್ಯಕ್ರಮದಲ್ಲಿ ದುಅ ನೆರವೇರಿಸಿದರು.

ಸಬೀಲುಲ್ ರಶಾದ್ ಇಸ್ಲಾಮಿಕ್ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಇಸ್ಮಾಯಿಲ್ ಜಾಸ್ಮೀನ್, ಜಿ.ಪಂ ಮಾಜಿ ಸದಸ್ಯ ಎನ್.ಎಸ್ ಕರೀಂ, ಮೊಯ್ಯದ್ದೀನ್ ಜುಮಾ ಮಸ್ಜಿದ್ ಉರುಮಣೆ ಅಧ್ಯಕ್ಷ ಅಬ್ಬಾಸ್ ಮದ್ಪಾಡಿ, ಸ್ಥಳೀಯ ಮುಖಂಡರಾದ ಹಮ್ಮಬ್ಬ, ಅಬ್ದುಲ್ ರಝಾಕ್, ಅಬ್ದುಲ್ ಖಾದರ್ ಕಲ್ಪಾದೆ, ಮುಹಮ್ಮದ್ ಶರೀಫ್, ಅಬ್ದುಲ್ ಖಾದರ್ ಅಡ್ಯಾರ್, ಕೆ.ಎಸ್ ಇಸ್ಮಾಯಿಲ್ ಕಿನ್ಯ, ಖಾದರ್ ಇನೊಳಿ, ಮುಹಮ್ಮದ್ ಕಮಾಲ್, ಎ.ಎಂ ಅಬ್ದುಲ್ ಅಝೀಝ್ , ಅಬ್ದುಲ್ ಹಕೀಂ ಡ್ಯಾನಿಶ್,ಅಬ್ಬಾಸ್, ಮೂಸಾ ನಾಟೆಕಲ್ಲು, ಮಹ್ಸೂಖ್ , ಫಾರೂಖ್ ನಯೀಮಿ ಮಚ್ಚಂಪಾಡಿ, ಅಬ್ದುಲ್ ಖಾದರ್ ಮುಸ್ಲಿಯಾರ್ ಉರುಮಣೆ, ಸಿದ್ದೀಕ್ ಮದನಿ ನಾಟೆಕಲ್ಲು,ಅಬ್ದುಲ್ ರಹಿಮಾನ್ ಮಾಸ್ಟರ್ ದೈಗೋಳಿ, ಅಬ್ಬಾಸ್ ಮಲಾರ್ ಮುಂತಾದವರು ಉಪಸ್ಥಿತರಿದ್ದರು.

ಕೆ.ವಿ ಅಬ್ದುಲ್ ರಹಿಮಾನ್ ಫೈಝಿ ಸ್ವಾಗತಿಸಿ .ಕಾರ್ಯದರ್ಶಿ ಟಿ.ಇಸ್ಮಾಯಿಲ್  ವಂದಿಸಿದರು. ಸ್ಥಳೀಯ ಇಮಾಮ್ ನಝೀರ್ ಸಖಾಫಿ ಕೊಯ್ಯೂರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News