ಪುತ್ತೂರು ಶ್ರಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನೂತನ ಪುಷ್ಪರಥ

Update: 2019-03-16 15:25 GMT

ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಮೂಡಬಿದಿರೆಯ ಅಶ್ವತ್ಥಪುರ ಎಂಬಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ 12 ಅಡಿ ಎತ್ತರದ ಪುಷ್ಪರಥವನ್ನು ಶನಿವಾರ ಮೂಡಬಿದಿರೆಯಿಂದ ಪುತ್ತೂರಿಗೆ ತರಲಾಯಿತು.

ನೂತನ ಪುಷ್ಪರಥಕ್ಕೆ ದೇವಾಲಯದ ಹೊರಾಂಗಣದಲ್ಲಿ ಆರತಿ ಬೆಳಗಿ ಸ್ವಾಗತಿಸಲಾಯಿತು. ಪುಷ್ಪರಥವನ್ನು22 ಲಕ್ಷ  ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮಾ.22ರಂದು ಪುಷ್ಪರಥವನ್ನು ದೇವರಿಗೆ ಸಮರ್ಪಣೆ ಮಾಡಲಾಗುತ್ತಿದೆ. ಈ ಪುಷ್ಪರಥವನ್ನು ವರ್ಷದಲ್ಲಿ ಒಂದು ದಿನ ವಾರ್ಷಿಕ ಜಾತ್ರೆಯ ಸಂದರ್ಭ ಎ.16ರಂದು ದೇವಾಲಯದ ಹೊರಾಂಗಣದಲ್ಲಿ ಎಳೆಯಲಾಗುತ್ತದೆ ಎಂದು ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ, ಸದಸ್ಯರಾದ ಜಾನು ನಾಯ್ಕ, ಯು.ಪಿ. ರಾಮಕೃಷ್ಣ, ಸಂಜೀವ ನಾಯಕ್, ರೋಹಿಣಿ ಆಚಾರ್ಯ, ನಯನಾ ರೈ, ವಸಂತ ಕೆದಿಲಾಯ, ಮುಖ್ಯ ಗುಮಾಸ್ತ ಜಗದೀಶ್, ವಾಸ್ತು ಇಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್, ಸಿವಿಲ್ ಇಂಜಿನಿಯರ್ ರಾಮಚಂದ್ರ ಘಾಟೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News