ಕಲ್ಲಡ್ಕ- ಕೆ.ಸಿ.ರೋಡ್ : ಮಾ.17ರಿಂದ ಧಾರ್ಮಿಕ ಪ್ರವಚನ, ಸನ್ಮಾನ ಕಾರ್ಯಕ್ರಮ

Update: 2019-03-17 08:08 GMT

ವಿಟ್ಲ : ಕಲ್ಲಡ್ಕ - ಕೆ.ಸಿ ರೋಡ್ ನ ಮಸ್ಜಿದ್ ಅಲ್ ಜಾಮಿಅ ಆಯಿಷಾ ಇಬ್ರಾಹಿಂ ಇದರ ವತಿಯಿಂದ ಧಾರ್ಮಿಕ ಪ್ರವಚನ ಹಾಗೂ ಸನ್ಮಾನ ಕಾರ್ಯಕ್ರಮ ಮಾ.17 ಮತ್ತು 18 ರಂದು ಮಸೀದಿ ವಠಾರದಲ್ಲಿ ನಡೆಯಲಿದೆ. 

ಮಾ. 17 ರಂದು ಕಿನ್ಯ ವಾದಿತೈಬ ಪ್ರಾಂಶುಪಾಲರಾದ ಕಾಸಿಂ ದಾರಿಮಿ ಉಪನ್ಯಾಸ ನೀಡುವರು. ಮಾ. 18 ರಂದು ಹಾಫಿಲ್ ನಿಝಾಮುದ್ದೀನ್ ಅಝರಿ ಕುಮ್ಮನಂ ಮುಖ್ಯ ಬಾಷನಗೈಯಲಿದ್ದು , ಹಾಜಿ ಪಿ.ಬಿ.ಇಬ್ರಾಹಿಂ ಭಟ್ಕಳ ಅವರನ್ನು ಸನ್ಮಾನಿಸಲಾಗುವುದು. 

ಹಾಜಿ ಜಿ ಅಬೂಬಕ್ಕರ್ ಗೋಳ್ತಮಜಲು, ಹಾಜಿ ಪಿ.ಎಸ್.ಅಬ್ದುಲ್ ಹಮೀದ್ ನೆಹರೂನಗರ,  ಕೆ.ಎಸ್.ಇಸ್ಮಾಯಿಲ್ ಹಾಜಿ ಕಲ್ಲಡ್ಕ, ಹಾಜಿ ಜಿ.ಮುಹಮ್ಮದ್ ಹನೀಫ್ ಗೋಳ್ತಮಜಲು, ಹಾಜಿ ಬಿ.ಕೆ.ಇದ್ದಿನಬ್ಬ ಕಲ್ಲಡ್ಕ,  ಜಿ.ಎಸ್.ಸುಲೈಮಾನ್ ಹಾಜಿ ಕಲ್ಲಡ್ಕ, ಹಾಜಿ ಮುಹಮ್ಮದ್ ರಫೀಕ್ ಕೊಡಾಜೆ,  ಅಬ್ದುಲ್ ಹಮೀದ್ ಹಾಜಿ ಗೋಲ್ಡನ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಸೀದಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News