ಎಸ್‌ಎಸ್‌ಎಲ್‌ಸಿ ನಂತರ ಮುದೇನು.. ಮಾಹಿತಿ ಕಾರ್ಯಾಗಾರ

Update: 2019-03-17 09:53 GMT

ಕಟಪಾಡಿ, ಮಾ.17: ಮಣಿಪುರ ರೋಟರಿ ಕ್ಲಬ್ ವತಿಯಿಂದ ಮಣಿಪುರ ಸಂಯುಕ್ತ ಪ್ರೌಢ ಶಾಲಾ 10ನೇ ತರಗತಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಲಾದ ಎಸ್‌ಎಸ್‌ಎಲ್‌ಸಿ ನಂತರ ಮುದೇನು...? ಮಾಹಿತಿ ಕಾರ್ಯಾಗಾರವನ್ನು ಶಾಲಾ ಮುಖ್ಯ ಶಿಕ್ಷಕಿ ರೂಪರೇಖಾ ಎಚ್. ಉದ್ಘಾಟಿಸಿ ದರು.

ಸಂಪನ್ಮೂಲ ವ್ಯಕ್ತಿಯಾಗಿ ರೋಟರಿ ಜಿಲ್ಲಾ ಸಾಕ್ಷರತಾ ಸಮಿತಿಯ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿ, ಸ್ವಾವಲಂಬಿ ಜೀವನಕ್ಕೆ ಪೂರಕವಾದ ಉದ್ಯೋಗಾವಕಾಶದ ಕೋರ್ಸುಗಳು, ಭವಿಷ್ಯದ ಗುರಿಯನ್ನು ನಿರ್ಧರಿಸಿ ಅದಕ್ಕೆ ಪೂರಕವಾದ ಉನ್ನತ ಹಾಗೂ ಅತ್ಯುನ್ನತ ಶಿಕ್ಷಣ, ತತ್ಸಮಾನ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.

ಮಣಿಪುರ ರೋಟರಿ ಸ್ಥಾಪಕ ಅಧ್ಯಕ್ಷ ಜೋಸೆಪ್ ಕುಂದರ್, ಶಿಕ್ಷಕರಾದ ಸತೀಶ್ ಸಾಲಿಯಾನ್, ನಾಗರಾಜ್ ಉಪಸ್ಥಿತರಿದ್ದರು. ಮಣಿಪುರ ರೋಟರಿ ಅಧ್ಯಕ್ಷ ಗುರುರಾಜ ಭಟ್ ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಮಹಮ್ಮದ್ ಶರೀಫ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News