ವಂಚಕರ ಬಗ್ಗೆ ಎಚ್ಚರ: ನಬಾರ್ಡ್

Update: 2019-03-18 16:58 GMT

ಉಡುಪಿ, ಮಾ.18: ಕೆಲವು ವಂಚಕರು ತಮ್ಮನ್ನು ನಬಾರ್ಡ್‌ನ ಪ್ರತಿನಿಧಿಗಳೆಂದು ಬಿಂಬಿಸಿಕೊಂಡು, ಭಾರತ ಸರಕಾರದ ಯೋಜನೆಗಳಡಿ ಸಹಾಯಧನ/ಕೃಷಿ ಪರಿಕರಗಳನ್ನು ಕೊಡಿಸುವುದಾಗಿ ಸಾರ್ವಜನಿಕರಿಂದ/ರೈತರಿಂದ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿರುವುದು ಸಂಸ್ಥೆಯ ಗಮನಕ್ಕೆ ಬಂದಿದೆ ಎಂದು ನೇಶನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಎಂಡ್ ರೂರಲ್ ಡೆವಲಪ್‌ಮೆಂಟ್ (ನಬಾರ್ಡ್) ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯ ರಾಜಧಾನಿಯಲ್ಲಿರುವ ಕ್ಷೇತ್ರೀಯ ಕಾರ್ಯಾಲಯಗಳ ಹಾಗೂ ನಿಯೋಜಿತ ಜಿಲ್ಲಾ ಕಚೇರಿಗಳ ಮೂಲಕ ಮಾತ್ರ ನಬಾರ್ಡ್ ಕಾರ್ಯ ನಿರ್ವಹಿಸುವು ದಾಗಿ ಸಂಸ್ಥೆ ತಿಳಿಸಿದೆ. ಸಂಭಾವ್ಯ ಫಲಾನುಭವಿಗಳಿಂದ ಯಾವುದೇ ಸ್ವಂತ ಬಂಡವಾಳ, ಸಾಗಾಣಿಕೆ ವೆಚ್ಚ, ತರಬೇತಿ ವೆಚ್ಚ ಇತ್ಯಾದಿಗಳನ್ನು ನಬಾರ್ಡ್ ವಸೂಲಿ ಮಾಡುವುದಿಲ್ಲ. ಸಾರ್ವಜನಿಕರು ತಮ್ಮ ಹಿತದೃಷ್ಥಿಯಿಂದ ಇಂತಹ ಮೋಸಗಾರರ ಬಲೆಗೆ ಬೀಳದಂತೆ ಅದು ಎಚ್ಚರಿಸಿದೆ.

ಸಾರ್ವಜನಿಕರು ಅಗತ್ಯವಿದ್ದಲ್ಲಿ ನಬಾರ್ಡ್ ಕರ್ನಾಟಕ ಕ್ಷೇತ್ರೀಯ ಕಾರ್ಯಾಲಯ, ನಂ.46, ನಬಾರ್ಡ್ ಟವರ್ಸ್‌, ಕೆಂಪೇಗೌಡ ರಸ್ತೆ, ಬೆಂಗಳೂರು -560009 (ದೂರವಾಣಿ:080-22076400/22076408), ಮಿಂಚಂಚೆ:  bangalore@nabard.org-ನ್ನು ಸಂಪರ್ಕಿಸಬಹುದು ಎಂದು ನಬಾರ್ಡ್‌ನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News