ಪಿ.ಎ. ತಾಂತ್ರಿಕ ಮಹಾವಿದ್ಯಾಲಯಕ್ಕೆ 'ಎಪಿಟೋಮ್-2019’ ಸಮಗ್ರ ಪ್ರಶಸ್ತಿ

Update: 2019-03-18 17:46 GMT

ಕೊಣಾಜೆ: ಸೈಂಟ್ ಅಲೋಶಿಯಸ್ ಇನ್ಸಿಟ್ಯೂಟ್ ಆಫ್ ಮ್ಯಾನೆಜ್‍ಮೆಂಟ್ ಮತ್ತು ಐ.ಟಿ. ಬೀರಿ ಇದರ ಆಶ್ರಯದಲ್ಲಿ  ಮಂಗಳೂರಿನಲ್ಲಿ ನಡೆದ ಎಪಿಟೋಮ್-2019 ರಾಷ್ಟ್ರಿಯ ಮಟ್ಟದ ಐ.ಟಿ. ಆ್ಯಂಡ್ ಇಂಜಿನಿಯರಿಂಗ್ ಫೆಸ್ಟ್‍ನಲ್ಲಿ ಪಿ.ಎ. ಕಾಲೇಜಿನ ಇಂಜಿನಿಯರಿಂಗ್‍ನ ಕಂಪ್ಯೂಟರ್ ಸೈನ್ಸ್ ವಿಭಾಗದ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ವಿದ್ಯಾರ್ಥಿಗಳಲ್ಲಿ ಅಬ್ದುಲ್‍ ರೆಹಮಾನ್ ಭಾತೀಶ್ ಮತ್ತು ಇತಿಶಾಮ್ ಆಲಿ “ಟೆಕ್‍ಕ್ವಿಝ್”ನಲ್ಲಿ ಪ್ರಥಮ ಸ್ಥಾನವನ್ನು, ಇತಿಶಾಮ್ ಆಲಿ “ಕೋಡಿಂಗ್”ನಲ್ಲಿ ದ್ವಿತೀಯ ಸ್ಥಾನ ಹಾಗೂ ಆಯಿಶಾ ಎಂ.ಜೆ. “ಆ್ಯಂಡ್ರಾಯ್ಡ್ ಆ್ಯಪ್‍ ಡೆವಲಪ್‍ಮೆಂಟ್”ನಲ್ಲಿ ಪ್ರಥಮ ಸ್ಥಾನಗಳನ್ನು ಗಳಿಸಿದ್ದಾರೆ. ಭಾಗವಹಿಸಿದ ಮತ್ತು ವಿಜೇತರಾದ ಎಲ್ಲಾ ವಿದ್ಯಾರ್ಥಿಗಳನ್ನು ಪಿ.ಎ. ಕಾಲೇಜು ಆಫ್ ಇಂಜಿನಿಯರಿಂಗ್‍ನ ಆಡಳಿತ ಮಂಡಳಿ ಮತ್ತು ಅಧ್ಯಾಪಕ ವೃಂದ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News