ಕಲ್ಲಡ್ಕ - ಕೆ.ಸಿ.ರೋಡ್: ಧಾರ್ಮಿಕ ಪ್ರವಚನ ಹಾಗೂ ಸನ್ಮಾನ ಕಾರ್ಯಕ್ರಮ

Update: 2019-03-19 08:57 GMT

ವಿಟ್ಲ, ಮಾ.19: ಮನುಷ್ಯನ ಪ್ರತಿಯೊಂದು ಸತ್ಕಾರ್ಯಗಳು ಅಲ್ಲಾಹನ ಸಂಪ್ರೀತಿಗಾಗಿ ಇರಬೇಕು. ಆತನ ಸಂಪ್ರೀತಿಯೇ ಮನುಷ್ಯನ ನಿಜವಾದ ಆಸ್ತಿ ಎಂದು ಪಿಡಬ್ಲ್ಯುಡಿ ಗುತ್ತಿಗೆದಾರ ಹಾಜಿ ಪಿ.ಬಿ.ಇಬ್ರಾಹಿಂ ಭಟ್ಕಳ ಹೇಳಿದ್ದಾರೆ.

ಕಲ್ಲಡ್ಕ - ಕೆ.ಸಿ.ರೋಡ್ ನ ಮಸ್ಜಿದ್ ಅಲ್ ಜಾಮಿಅ ಆಯಿಷಾ ಇಬ್ರಾಹಿಂ ವತಿಯಿಂದ ಇಲ್ಲಿನ ಶೈಖುನಾ ಜಬ್ಬಾರ್ ಉಸ್ತಾದ್ ವೇದಿಕೆಯಲ್ಲಿ ನಡೆದ ಧಾರ್ಮಿಕ ಪ್ರವಚನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಹುಟ್ಟೂರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ಫೈಝಿ ಉದ್ಘಾಟಿಸಿದರು. ಕೆ.ಸಿ.ರೋಡ್ ಮಸೀದಿಯ ಅಧ್ಯಕ್ಷ ಪಿ.ಬಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಹಾಫಿಲ್ ನಿಝಾಮುದ್ದೀನ್ ಅಝ್ಹರಿ ಕುಮ್ಮನಂ ಮುಖ್ಯ ಭಾಷಣಗೈದರು.

ಕಲ್ಲಡ್ಕ ಎಂ.ಜೆ.ಎಂ. ಅಧ್ಯಕ್ಷ ಹಾಜಿ ಜಿ.ಅಬೂಬಕರ್ ಗೋಳ್ತಮಜಲು, ಹಾಜಿ ಸುಲೈಮಾನ್ ನಾರ್ಶ, ಹಾಜಿ ಜಿ.ಮುಹಮ್ಮದ್ ಹನೀಫ್ ಗೋಳ್ತಮಜಲು, ಹಾಜಿ ಬಿ.ಕೆ.ಇದಿನಬ್ಬ ಕಲ್ಲಡ್ಕ, ಜಿ.ಎಸ್.ಸುಲೈಮಾನ್ ಹಾಜಿ ಕಲ್ಲಡ್ಕ, ಹಾಜಿ ಜಿ.ಯೂಸುಫ್ ಗೋಳ್ತಮಜಲು, ನವಾಝ್ ಕೆ.ಎನ್., ಹಾಜಿ ಕೆ.ಎಂ.ಶಾಫಿ, ಹಾಜಿ ಅಬ್ದುಲ್ ಹಮೀದ್ ಗೋಲ್ಡನ್, ದ.ಕ. ಜಿಲ್ಲಾ ವಕ್ಫ್ ಮಂಡಳಿ ಸಲಹಾ ಸಮಿತಿಯ ಸದಸ್ಯ ನಝೀರ್ ಮಠ, ಹಾಜಿ ಬಿ.ಎ.ಖಾದರ್ ಕೆ.ಸಿ.ರೋಡ್, ಪಿ.ಬಿ. ಶಾಹಿನ್ ಭಟ್ಕಳ, ಪಿ.ಬಿ.ಅಬ್ದುಲ್ ಅಝೀಝ್ ಬೋಳಂಗಡಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕೆ.ಸಿ.ರೋಡ್ ಮಸೀದಿಯ ಖತೀಬ್ ಹೈದರ್ ದಾರಿಮಿ ಸ್ವಾಗತಿಸಿದರು. ಅಬ್ದುಲ್ಲಾ ಮುಸ್ಲಿಯಾರ್ ವಂದಿಸಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News