ಬೆಳ್ಮಣ್ಣು ಜೇಸಿರೆಟ್‍ನಿಂದ ಮಹಿಳೆಯರಿಗೆ ಸನ್ಮಾನ

Update: 2019-03-19 12:45 GMT

ಕಾರ್ಕಳ: ಮಹಿಳಾ ದಿನಾಚರಣೆ ಪ್ರಯುಕ್ತ ಬೆಳ್ಮಣ್ಣು ಜೇಸಿಐನ ಜೇಸಿರೆಟ್ ವಿಭಾಗದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಸನ್ಮಾನ ನಡೆಯಿತು.

ಶಿಕ್ಷಣ ಕ್ಷೇತ್ರದಲ್ಲಿ ಸಂತ ಜೋಸೆಫ್ ಪ್ರೌಢಶಾಲಾ ಶಿಕ್ಷಕಿಯರಿಗೆ, ಉದ್ಯಮ ಕ್ಷೇತ್ರದಲ್ಲಿ ಸೆಲಿನ್ ಮೈಕಲ್ ಡಿಸೋಜರಿಗೆ, ಸಾಮಾಜಿಕ ಕ್ಷೇತ್ರದಲ್ಲಿ ಬೆಳ್ಮಣ್ಣು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರಿಗೆ, ಕ್ರೀಡಾ ಕ್ಷೇತ್ರದಲ್ಲಿ ಬೆಳ್ಮಣ್ಣು ಪ.ಪೂ. ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕಿ ರೂಪಾ, ಕೃಷಿ ಕ್ಷೇತ್ರದಲ್ಲಿ ಲೀಲಾ ಶೆಟ್ಟಿ ಇನ್ನಾ ಅವರನ್ನು ಸನ್ಮಾನಿಸಲಾಯಿತು.

ಜೇಸಿರೆಟ್ ಅಧ್ಯಕ್ಷೆ ಪ್ರತಿಭಾ ಎನ್. ರಾವ್, ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಆಚಾರ್ಯ, ಬೆಳ್ಮಣ್ಣು ಜೇಸಿ ಪೂರ್ವಾಧ್ಯಕ್ಷರುಗಳಾದ ಗಣಪತಿ ಆಚಾರ್ಯ, ರಘುನಾಥ ನಾಯಕ್, ರವಿರಾಜ್ ಶೆಟ್ಟಿ, ರಘುರಾಮ್ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News