ಬಿಲ್ಲಾಡಿ: ಮರಾಠಿ ಜನಾಂಗದವರಲ್ಲಿ ಮತದಾನ ಜಾಗೃತಿ

Update: 2019-03-19 15:35 GMT

ಉಡುಪಿ, ಮಾ.19: ಜಿಲ್ಲಾಡಳಿತ, ಮತದಾರ ಜಾಗೃತಿ ಅಭಿಯಾನ ಸಮಿತಿ (ಸ್ವೀಪ್) ಹಾಗೂ ಉಡುಪಿ ತಾಲೂಕಿನ ಬಿಲ್ಲಾಡಿ ಹಾಗೂ ಹೆಗ್ಗುಂಜೆ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಹೆಗ್ಗುಂಜೆ ಗ್ರಾಮದ ರಾವುತರ ಮನೆ ದೇವಸ್ಥಾನದ ಪರಿಸರದಲ್ಲಿ ನಡುವೆ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ವಿವಿಪ್ಯಾಟ್ ಬಗ್ಗೆ ಮಾಹಿತಿ ಪ್ರಾತ್ಯಕ್ಷಿಕೆ ನಡೆಯಿತು.

ಸ್ವೀಪ್ ಸಮಿತಿ ಅಧ್ಯಕ್ಷೆ, ಜಿಪಂ ಸಿಇಒ ಸಿಂಧೂ ಬಿ ರೂಪೇಶ್, ವಿವಿಪ್ಯಾಟ್ ಕುರಿತು ಮಾಹಿತಿ ನೀಡಿದರು ಹಾಗೂ ಸೇರಿದ್ದ ಗ್ರಾಮಸ್ಥರು ಮತ್ತು ಹೋಳಿ ಹುಣ್ಣಿಮೆಯ ವೇಷಧರಿಸಿ ಬಂದಿದ್ದ ಮರಾಠಿ ಜನಾಂಗದ ಎಲ್ಲರಿಗೂ ಕಡ್ಡಾಯ ವಾಗಿ ನ್ಯಾಯಸಮ್ಮತವಾಗಿ ಮತದಾನ ಮಾಡುತ್ತೇನೆ ಎಂದು ಪ್ರತಿಜ್ಞಾವಿಧಿ ಯನ್ನು ಬೋಧಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಎರಡು ಗ್ರಾಪಂಗಳ ಎಲ್ಲಾ ಅರ್ಹ ಮತದಾರರು ಎ.18ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲೊ್ಗಳ್ಳುವಂತೆ ಮನವಿ ಮಾಡಿಕೊಂಡರು.

ಈ ಸಂಧರ್ದಲ್ಲಿ ಉಡುಪಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಕೆ ರಾಜು, ತಾ.ಪಂ ಸಹಾಯಕ ನಿರ್ದೇಶಕ ಹರಿಕೃಷ್ಣ ಶಿವತ್ತಾಯ, ತಾಪಂ ಮ್ಯಾನೇಜರ್ ರಾಮದಾಸ್, ಬಿಲ್ಲಾಡಿ ಹಾಗೂ ಹೆಗ್ಗುಂಜೆ ಗ್ರಾಪಂಗಳ ಪಿಡಿಒ, ಕಾರ್ಯದರ್ಶಿ ಅಲ್ಲದೇ ಸ್ಥಳೀಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News