ಉಡುಪಿ: 100 ಸರಕಾರಿ ಶಾಲೆಗಳಿಗೆ ಶೌಚಾಲಯ ಶುಚಿತ್ವ ಕಿಟ್ ವಿತರಣೆ

Update: 2019-03-19 16:03 GMT

ಉಡುಪಿ, ಮಾ.19: ರೋಟರಿ ಅಂಬಲಪಾಡಿ ಬೆಂಗಳೂರಿನ ಕ್ಯಾರಿಬ್ಯಾಗ್ ಫೌಂಡೇಶನ್ ಮತ್ತು ಪ್ರೊಜೆಕ್ಟ್ ಇನ್ಫ್ರಾಸ್ಟ್ರಕ್ಚರ್ ಸಿಸ್ಟಮ್ಸ್‌ನ ಸಹಕಾರದೊಂದಿಗೆ ಉಡುಪಿಯ ಸುಮಾರು 100 ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಶೌಚಾಲಯ ಶುಚಿತ್ವ ಕಿಟ್‌ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಚಾಲನೆ ನೀಡಿ, ಸಾಂಕೇತಿಕವಾಗಿ ಐದು ಶಾಲೆಗಳಿಗೆ ವಿತರಿಸಲಾಯಿತು.

ಬಳಿಕ ಮಾತನಾಡಿದ ರೋಟರಿ ಅಂಬಲಪಾಡಿ ಅಧ್ಯಕ್ಷ ಖಲೀಲ್ ಅಹ್ಮದ್, ರೋಟರಿ ಕ್ಲಬ್ ಸ್ವಚ್ಛ ಭಾರತ ಅಭಿಯಾನದಡಿ ಶಾಲಾ ಕಾಲೇಜುಗಳಲ್ಲಿ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಈ ನಿಟ್ಟಿನಲ್ಲಿ ವಾಶ್ ಇನ್ ಸ್ಕೂಲ್ ಕಾರ್ಯಕ್ರಮದ ಅನ್ವಯ ಶೌಚಾಲಯಗಳ ನಿರ್ಮಾಣ, ಸ್ಯಾನಿಟರಿ ನ್ಯಾಪ್‌ಕಿನ್ ಬರ್ನಿಂಗ್ ಯಂತ್ರಗಳ ಕೊಡುಗೆಯಂತಹ ಯೋಜೆಗಳನ್ನು ಹಮ್ಮಿಕೊಂಡಿದೆ ಎಂದರು.

ಇದೀಗ ಉಡುಪಿ ಅನುಪಾಸಿನ ಸುಮಾರು 25 ಸರಕಾರಿ ಮತ್ತು ಅನು ದಾನಿತ ಶಾಲೆಗಳಿಗೆ ಶೌಚಾಲಯ ಶುಚಿತ್ವ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಜೂನ್ ತಿಂಗಳಲ್ಲಿ ಉಳಿದ 75 ಶಾಲೆಗಳಿಗೆ ಕಿಟ್‌ಗಳನ್ನು ವಿತರಿಸಲಾಗುವುದು. ಶಾಲೆಗಳಿಗೆ ಮಾತ್ರವಲ್ಲದೆ ಪೊಲೀಸ್ ಠಾಣೆ, ಸರಕಾರಿ ಆಸ್ಪತ್ರೆ, ಹಾಸ್ಟೆಲ್‌ಗಳಿಗೂ ಈ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದರು.

ಈ ಕಿಟ್‌ನಲ್ಲಿ ಶೌಚಾಲಯ ಶುಚಿತ್ವಕ್ಕೆ ಸಂಬಂಧಪಟ್ಟ ಫ್ಲೋರ್ ಕ್ಲೀನರ್, ಟಾಯ್ಲೆಟ್ ಕ್ಲೀನರ್, ಹಾಂಡ್ ವಾಷ್, ಬ್ರಷ್ ಮತ್ತು ಗ್ಲೌಸ್‌ಗಳನ್ನು ಉಚಿತ ವಾಗಿ ನೀಡಲಾಗುತ್ತದೆ. ಇದು ಶಾಶ್ವತ ಯೋಜನೆಯಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕ್ಯಾರಿಬ್ಯಾಗ್ ಫೌಂಡೇಶನ್‌ನ ರಘುನಾಥ್ ಎಸ್.ಬಿ., ಆನಂದ್, ರೋಟರಿ ಕಾರ್ಯದಶರ್ಇ ದುರ್ಗಾಪ್ರಸಾದ್, ಅಶೋಕ್ ಕುಮಾರ್ ಶೆಟ್ಟಿ, ಜಯಪ್ರಕಾಶ್ ಕೆದ್ಲಾಯ, ಸುಬ್ಬಣ್ಣ ಪೈ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News