ಗಂಗೊಳ್ಳಿ ತೌಹೀದ್ ಶಾಲೆಯ ಶಿಕ್ಷಕ ರಕ್ಷಕರ ಸಭೆ

Update: 2019-03-19 16:05 GMT

ಕುಂದಾಪುರ, ಮಾ.19: ಗಂಗೊಳ್ಳಿ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕರ ಸಭೆಯು ತೌಹೀದ್ ವಿಶ್ವಸ್ಥ ಮಂಡಳಿಯ ಖಜಾಂಜಿ ಅಬ್ದುಲ್ ಹಮೀದ್ ಶೇಖ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.

ಹೆಮ್ಮಾಡಿ ಸಂಜೀವಿನಿ ಪೈಪ್ಸ್‌ನ ಮಾಲಕ ಮುಹಮ್ಮದ್ ಅಲಿ ಮುಖ್ಯ ಅತಿಥಿಯಾಗಿದ್ದರು. ಟ್ರಸ್ಟಿಗಳಾದ ಇನಾಯತುಲ್ಲಾ ಮಡಿಕಲ್, ಮುರ್ಫಾದ್ ನಾಖುದಾ, ಶಿರೂರು ತೌಹೀದ್ ಪಬ್ಲಿಕ್ ಸ್ಕೂಲ್‌ನ ದೀನಿಯಾತ್ ಶಿಕ್ಷಕ ಮೌಲಾನಾ ಝಿಯಾ ಉರ್ ರೆಹ್ಮಾನ್ ನದ್ವಿ, ತೌಹೀದ್ ಪ್ರಬಂಧಕ ಅಬ್ದುಲ್ ಶುಕೂರ್ ಜಿ.ಡಿ ಉಪಸ್ಥಿತರಿದ್ದರು.

ತೌಹೀದ್‌ನ ಕಾರ್ಯದರ್ಶಿ ಅಖ್ತರ್ ಅಹ್ಮದ್ ಖಾನ್ ಪ್ರಸಕ್ತ ಶೈಕ್ಷಣಿಕ ವರ್ಷದ ಪಕ್ಷಿನೋಟವನ್ನು ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶಬಾನಾ ಫಿರ್ದೋಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತೌಹೀದ್ ಶಾಲಾ ದೀನಿಯಾತ್ ಶಿಕ್ಷಕ ಹಾಫೀಜ್ ಸಿಬ್ಗತುಲ್ಲಾಹ ಎಂ.ಎಚ್. ಕಿರಾತ್ ಪಠಿಸಿದರು.

ವಿದ್ಯಾರ್ಥಿಗಳಾದ ಸಾಯಿಮ್ ಹಾಗೂ ಕನಸುಹಾ ಹಮ್ದ್ ಮತ್ತು ನಾತ್ ಹಾಡಿದರು. ಶಾಲಾ ಶಿಕ್ಷಕಿ ಅಫೀಫಾ ಜಿ.ಡಿ. ಸ್ವಾಗತಿಸಿದರು. ಝೀಬಾ ಮೆಹ್ರೀನ್ ವಂದಿಸಿದರು. ಫಾತಿಮಾ ಸನಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News