ಅಪರಾಧ-ಭ್ರಷ್ಟಾಚಾರ ನಿಯಂತ್ರಣ ಸಂಘಕ್ಕೆ ಮುಹಮ್ಮದ್ ಎನ್.ಎ. ಆಯ್ಕೆ

Update: 2019-03-19 16:15 GMT
ಮುಹಮ್ಮದ್ ಎನ್.ಎ.

ಮಂಗಳೂರು, ಮಾ.19: ಅಪರಾಧ ಮತ್ತು ಭ್ರಷ್ಟಾಚಾರ ನಿಯಂತ್ರಣ ಸಂಘದ ದಕ್ಷಿಣ ಭಾರತದ ಅಧ್ಯಕ್ಷರಾಗಿ ಮುಹಮ್ಮದ್ ಎನ್.ಎ. ಆಯ್ಕೆಯಾಗಿದ್ದಾರೆ.

ಅಪರಾಧ-ಭ್ರಷ್ಟಾಚಾರ ನಿಯಂತ್ರಣ ಸಂಘ (ಕ್ರೈಮ್ ಆ್ಯಂಡ್ ಕರಪ್ಷನ್ ಕಂಟ್ರೋಲ್ ಅಸೋಸಿಯೇಶನ್) ಸ್ಥಾಪಕಧ್ಯಾಕ್ಷ ದಿನೇಶ್ ಗುಪ್ತಾ ಅವರು ಮುಹಮ್ಮದ್ ಎನ್.ಎ. ಅವರನ್ನು ದಕ್ಷಿಣ ಭಾರತದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.

ಮುಹಮ್ಮದ್ ಅವರು ಕರ್ನಾಟಕ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಆರು ರಾಜ್ಯಗಳನ್ನು ಒಳಗೊಂಡ ದಕ್ಷಿಣ ಭಾರತದ ಸಮಿತಿಗೆ ಇವರು ಅಧ್ಯಕ್ಷರಾಗಿದ್ದಾರೆ. ಗುಜರಾತ್ ಕೇಂದ್ರೀಕರಿಸಿ ದೇಶಾದಾದ್ಯಂತ 150ಕ್ಕೂ ಅಧಿಕ ಕಚೇರಿಗಳನ್ನು ಹೊಂದಿರುವ ಅಪರಾಧ ಮತ್ತು ಭ್ರಷ್ಟಾಚಾರ ನಿಯಂತ್ರಣ ಸಂಘ ಈಗಾಗಲೇ ಹಲವಾರು ಭ್ರಷ್ಟಾಚಾರದ ವಿರುದ್ದ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News