ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಗ್ರಾಹಕರ ದಿನಾಚರಣೆ

Update: 2019-03-19 17:10 GMT

ಭಟ್ಕಳ: ಅಂತಾರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಅಂಗವಾಗಿ ಇಲ್ಲಿನ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ರಾಜ್ಯ ಕಾನೂನು ಸೇವಾ ಸಮಿತಿ, ಉ.ಕ.ಜಿಲ್ಲಾ ಕಾನೂನು ಸೇವಾ ಸಮಿತಿ, ತಾಲೂಕಾ ಕಾನೂನು ಸೇವಾ ಸಮಿತಿ, ತಾಲೂಕ ವಕೀಲರ ಸಂಘ,  ಅಭಿಯೋಜನಾ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಭಟ್ಕಳ ಎಜ್ಯುಕೇಶನ್ ಟ್ರಸ್ಟ್  ಇವುಗಳ ಸಂಯುಕ್ತ ಆಶ್ರಯದಲ್ಲಿ ಗ್ರಾಹಕರ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. 

ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಸ ಕೃಷ್ಣಾರಾಜ ಕೆ., ಅವರು ಮಾತನಾಡಿ ಗ್ರಾಹಕರಿಗೆ  ತಮ್ಮ ಹಕ್ಕುಗಳ ಕುರಿತು ಅರಿವಿಲ್ಲದೇ ಇರುವುದರಿಂದ ಸುಲಭದಲ್ಲಿ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಗ್ರಾಹಕರು ಮೋಸ ಹೋಗುವುದನ್ನು ತಪ್ಪಿಸಲಿಕ್ಕಾಗಿಯೇ ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಗ್ರಾಹಕರ ವ್ಯಾಜ್ಯ ಪರಿಹಾರ ನ್ಯಾಯಾಲಯಗಳನ್ನು ಸ್ಥಾಪಿಸಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಕಮಲಾಕರ ಭೈರುಮನೆ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ನ್ಯಾಯವಾದಿ ವಿ.ಆರ್.ಸರಾಫ್ ಅವರು ಗ್ರಾಹಕರ ವ್ಯಾಜ್ಯ ಪರಿಹಾರ ಕೋರ್ಟಿನಲ್ಲಿ ಗ್ರಾಹಕರು ಅತ್ಯಂತ ಸುಲಭದಲ್ಲಿ ತಮಗಾದ ಅನ್ಯಾಯದ ಅಥವಾ ಮೋಸದ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶ ಮಾಡಿಕೊಡಲಾಗಿದೆ. ಗ್ರಾಹಕರು ತಮಗಾದ ಅನ್ಯಾಯವನ್ನು ಅಥವಾ ತಾವು ಮೋಸ ಹೋಗಿರುವ ಕುರಿತು ವಿವರವಾಗಿ ಪತ್ರ ಮುಖೇನ ಬರೆದರೂ ಕೂಡಾ ಪ್ರಕರಣ ದಾಖಲಿಸಿಕೊಂಡು ತನಿಖೆ ಗೊಳಪಡಿಸಲಾಗುವುದು ಎಂದರು. ತನಿಖೆಯಿಂದ ತೃಪ್ತಿಯಾಗದೇ ಇರುವ ಪಕ್ಷದಲ್ಲಿ ಗ್ರಾಹಕರ ನ್ಯಾಯಾಲಯವಲ್ಲದೇ ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿಯೂ ಕೂಡಾ ನ್ಯಾಯಕ್ಕಾಗಿ ಪ್ರಕರಣ ದಾಖಲಿಸುವ ಅವಕಾಶ ಕೂಡಾ ಇದೆ ಎಂದರು. 

ಕಾರ್ಯಕ್ರಮದಲ್ಲಿ ಸಹಾಯಕ ಸರಕಾರಿ ಅಭಿಯೋಜಕಿ ಇಂದಿರಾ ನಾಯ್ಕ, ಉಪನ್ಯಾಸಕ ಪಣಿಯಪ್ಪಯ್ಯ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು. 
ಪ್ರೊ. ಆನಂದ ದೇವಾಡಿಗ ಸ್ವಾಗತಿಸಿದರು. ಬಿ.ಸಿ.ಎ. ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News