ಲೋಕಸಭಾ ಚುನಾವಣೆ: ಗೃಹರಕ್ಷಕ ದಳದ ಸಿದ್ಧತಾ ಸಭೆ

Update: 2019-03-19 17:22 GMT

ಮಂಗಳೂರು, ಮಾ.19: ಲೋಕಸಭಾ ಚುನಾವಣೆಗೆ ಸನ್ನದ್ಧಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಗೃಹರಕ್ಷಕ ದಳದ ಎಲ್ಲಾ 14 ಘಟಕಗಳ ಘಟಕಾಧಿಕಾರಿಗಳ ಸಭೆಯು ಮಂಗಳವಾರ ದ.ಕ. ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಜರುಗಿತು.

ಮಂಗಳೂರು, ಮುಲ್ಕಿ, ಸುರತ್ಕಲ್, ಪಣಂಬೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಬೆಳ್ಳಾರೆ, ಸುಬ್ರಹ್ಮಣ್ಯ, ಸುಳ್ಯ, ವಿಟ್ಲ, ಕಡಬ, ಮೂಡುಬಿದಿರೆ, ಉಪ್ಪಿನಂಗಡಿ ಘಟಕಾಧಿಕಾರಿಗಳು ಪಾಲ್ಗೊಂಡಿದ್ದರು. ಚುನಾವಣಾ ಮಹತ್ವದ ಬಗ್ಗೆ ಮತ್ತು ಗೃಹರಕ್ಷಕ ಜವಾಬ್ದಾರಿಗಳ ಕುರಿತು ಉಪ ಸಮಾದೇಷ್ಟ ರಮೇಶ್ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಮಾದೇಷ್ಟ ಡಾ.ಮುರಲಿ ಮೋಹನ ಚೂಂತಾರು ಮಾತನಾಡಿ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಚುನಾವಣೆ ಎನ್ನುವುದು ಹಬ್ಬದ್ದಂತೆ. ಈ ಹಬ್ಬದ ಯಶಸ್ವಿಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಜೊತೆ ಗೃಹರಕ್ಷಕರು ಬಹುಮುಖ್ಯ ಭೂಮಿಕೆ ವಹಿಸುತ್ತಾರೆ. ದ.ಕ. ಜಿಲ್ಲೆಯಿಂದ ಈ ಬಾರಿ ಗರಿಷ್ಠ 850 ಮಂದಿ ಗೃಹರಕ್ಷಕರು ಚುನಾವಣಾ ಹಬ್ಬದಲ್ಲಿ ಭಾಗವಹಿಸಲಿದ್ದಾರೆ ಎಂದರು

ಮಂಗಳೂರು ಘಟಕದ ಮಾರ್ಕ್‌ ಶೇರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News