ಕೇಂದ್ರ ಬಜೆಟ್ ಬಗ್ಗೆ ಚರ್ಚಾ ಕೂಟ

Update: 2019-03-19 17:36 GMT

ಮಂಗಳೂರು, ಮಾ.19: ಮಂಗಳೂರು ವಿವಿ ಸಂಧ್ಯಾ ಕಾಲೇಜಿನ ಎಂ.ಬಿ.ಎ. (ಐಬಿ) ಮತ್ತು ಸ್ನಾತಕೋತ್ತರ ವಾಣಿಜ್ಯ ವಿಭಾಗವು ಜಂಟಿಯಾಗಿ ಕೇಂದ್ರ ಬಜೆಟ್ 2019-20ರ ಕುರಿತು ಚರ್ಚಾಕೂಟವನ್ನು ಏರ್ಪಡಿಸಿತ್ತು.

ವಿದ್ಯಾರ್ಥಿಗಳಿಗೆ ಪ್ರಚಲಿತ ಮಾಹಿತಿಯನ್ನು ನೀಡುವ ಹಾಗೂ ಬಜೆಟ್‌ನ ವಿಶ್ಲೇಷಣೆಯನ್ನು ಮಾಡುವ ಉದ್ಧೇಶದಿಂದ ಈ ಚರ್ಚಾಕೂಟವನ್ನು ಆಯೋಜಿಸಿತ್ತು. ಚರ್ಚೆಯಲ್ಲಿ ಸಮನ್ವಯಕಾರರಾಗಿ ಸಂತ ಅಲೋಶಿಯಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ನಾಬರ್ಟ್ ಲೋಬೋ, ಲೆಕ್ಕ ಪರಿಶೋಧಕ ಸಿ.ಎ. ಗಿರಿಧರ ಕಾಮತ್ ಮತ್ತು ಕುಂಬ್ಳೆ ಸೋಲಾರ್ ಎನರ್ಜಿ ಸೊಲ್ಯುಸನ್‌ನ ಆಡಳಿತ ನಿರ್ದೇಶಕ ಕುಂಬ್ಳೆ ನರಸಿಂಹ ಪ್ರಭು ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ವಿಭಾಗದ ಸಂಯೋಜಕ ಡಾ.ಎ. ಸಿದ್ದೀಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ರಾಮಕೃಷ್ಣ ಬಿ.ಎಂ. ಚರ್ಚಾಕೂಟದ ಅಧ್ಯಕ್ಷತೆ ವಹಿಸಿದರು. ಚರ್ಚಾಕೂಟ ಸಂಚಾಲಕ ವೆಂಕಟೇಶ ನಾಯಕ್ ಸ್ವಾಗತಿಸಿದರು. ಉಪನ್ಯಾಸಕಿ ಸ್ಟೀವನ್ ಡಿಸೋಜ ವಂದಿಸಿದರು. ವಾಣಿಜ್ಯ ಸ್ನಾತಕೋತ್ತರ ವಿಭಾಗದ ಉಪನ್ಯಾಸಕಿ ಕಾವ್ಯಾ ಪಿ. ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News