ಇಟಲಿಯ ಬೃಹತ್ ಹಡಗು ಎನ್‌ಎಂಪಿಟಿಗೆ ಭೇಟಿ

Update: 2019-03-19 17:39 GMT

ಮಂಗಳೂರು, ಮಾ.19: ಇಟಲಿ ಮೂಲದ ಐಶಾರಾಮಿ ಪ್ರವಾಸಿ ಹಡಗೊಂದು ಮಂಗಳೂರಿನ ಎನ್‌ಎಂಪಿಟಿಗೆ ಮಂಗಳವಾರ ಭೇಟಿ ನೀಡಿತು.
ಇಟಲಿಯ ‘ಕೋಸ್ಟಾ ನಿಯೋರಿವೆರಿಯಾ’ ಹಡಗಿನಲ್ಲಿ 1,099 ಪ್ರಯಾಣಿಕರು ಹಾಗೂ 562 ಹಡಗು ಸಿಬ್ಬಂದಿ ಆಗಮಿಸಿದ್ದಾರೆ.

ನವಮಂಗಳೂರು ಬಂದರು ತೀರಕ್ಕೆ ವರ್ಷದಲ್ಲಿ ನೂರಾರು ಸಂಖ್ಯೆಯ ಪ್ರವಾಸಿ ಹಡಗುಗಳ ಆಗಮಿಸುತ್ತಿದ್ದು, ಕಳೆದ ಮಾ.7ರಂದು ‘ಎಂಎಸ್‌ಸಿ ಲಿರಿಕಾ’ ಎಂಬ ಪ್ರವಾಸಿ ಹಡಗು 2,100 ಪ್ರಯಾಣಿಕರನ್ನು ಹೊತ್ತು ಕರೆತಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News