​ವಿದೇಶ ಪ್ರವಾಸ ಬಯಸಿದ್ದೀರಾ...? ಸಣ್ಣ ಖರ್ಚಿನಲ್ಲಿ ಲಾವೋಸ್‌ಗೆ ಹಾರಿ...!

Update: 2019-03-20 06:25 GMT

ನೀವು ಲಾವೋಸ್ ಎಂಬ ದೇಶದ ಬಗ್ಗೆ ಕೇಳಿರಬಹುದು. ಸಣ್ಣ ಖರ್ಚಿನಲ್ಲಿ ಇಲ್ಲಿಗೆ ರಜಾ ದಿನಗಳನ್ನು ಕಳೆಯಲು ಹೋಗಬಹುದು. ಜಗತ್ತಿನ ಅತ್ಯಂತ ದೊಡ್ಡ ಗುಹಾ ನದಿ ಲಾವೋಸ್‌ನಲ್ಲಿದೆ. ಕಾಡಿನ ಸೌಂದರ್ಯವನ್ನು ಸವಿಯಲು ಇಷ್ಟಪಡುವವರು ದಿ ಲೂಪ್ ಎಂಬ ಹೆಸರಿನ ರಸ್ತೆಯಲ್ಲಿ ಬೈಕ್ ಸವಾರಿಯೂ ಮಾಡಬಹುದು.ನಾಂ ನೋಟ್ ನದಿಯಲ್ಲಿ ಬೋಟ್ ಸವಾರಿ, ಮೀನು ಹಿಡಿಯುವುದು, ಕ್ಯಾಂಪ್ ಫಯರ್, ನದಿ ತೀರದಲ್ಲಿ ವಾಸ ಹೀಗೆ ಪ್ರಕೃತಿಯ ಜೊತೆ ಸೇರಿ ಇಲ್ಲಿ ಕಾಲ ಕಳೆಯಬಹುದು.ಪ್ರವಾಸಕ್ಕೆ ಅಕ್ಟೋಬರ್-ಎಪ್ರಿಲ್ ಅತ್ಯಂತ ಸೂಕ್ತ ತಿಂಗಳು. ಅಂದಹಾಗೆ ಲಾವೋಸ್ ಸಂದರ್ಶಿಸು ಭಾರತೀಯರಿಗೆ ವೀಸಾದ ಅಗತ್ಯವಿಲ್ಲ. ವೀಸಾ ಆನ್ ಅರೈವಲ್ ಪ್ರಕಾರ 30 ದಿನಗಳವರೆಗೆ ವೀಸಾ ಇಲ್ಲದೆ ಲಾವೋಸ್‌ನಲ್ಲಿ ವಾಸಿಸಬಹುದು. ಹೋಟೆಲ್ ಕನ್ಫರ್ಮೇಶನ್ ವೋಚರ್, ರಿಟರ್ನ್ ಟಿಕೆಟ್ ದೃಢೀಕರಣ, ಆರು ತಿಂಗಳ ಕಾಲಾವಧಿಯ ಪಾಸ್‌ಪೋರ್ಟ್, ಫೋಟೊ ಹಾಜರುಪಡಿಸಿ 30 ಯುಎಸ್ ಡಾಲರ್ ಫೀಸ್ ಪಾವತಿಸಿದರೆ ವೀಸ ಲಭಿಸುತ್ತದೆ. ಆದರೆ ಆರು ತಿಂಗಳ ಕಾಲಾವಧಿಯ ಭಾರತೀಯ ಪಾಸ್‌ಪೋರ್ಟ್ ಜೊತೆಗಿರಬೇಕು.ಪ್ರಕೃತಿಯ ಸೌಂದರ್ಯನ್ನು ಆಸ್ವಾದಿಸುತ್ತಾ ಪ್ರಯಾಣ ಇಷ್ಟಪಡುವವರಿಗೆ ಲಾವೋಸನ್ನು ಮರೆಯಲು ಸಾಧ್ಯವಿಲ್ಲ. ಲಾವೋಸ್‌ನ ರಾಜಧಾನಿಯ ಹೆಸರು ವಿಯಂಟಿನೆ. ರಾಜಧಾನಿಯ ನಗರದಿಂದ 200 ಕಿ.ಮೀ. ದೂರದಲ್ಲಿ ಅಡ್ವಂಚರ್ ಡೆಸ್ಟಿನೇಶನ್ ವಾಂಗ್ ವೀಂಗ್ ಇದೆ. ಬಿಸಿ ಗಾಳಿ ಬಲೂನಿನ ಪ್ರಯಾಣ ಇಲ್ಲಿನ ಮುಖ್ಯ ಆಕರ್ಷಣೆಯಾಗಿದೆ. ಬಂಡೆಯಲ್ಲಿ ಆನೆಯ ಚಿತ್ರವನ್ನು ಕೆತ್ತಿದ ಎಲಿಫೆಂಟ್ ಕೇವ್, ಕೆಂಗ್ ನುಯಿ ಜಲಪಾತ, ನಾಂ ಸೋಂಗ್ ನದಿಯಲ್ಲಿ ಕಯಾಕಿಂಗ್, ಬ್ಲೂ ಲಗೂನ್ ಸರೋವರ ಇವೆಲ್ಲವೂ ರೋಮಾಂಚನವನ್ನುಂಟು ಮಾಡುತ್ತವೆ.ಜಗತ್ತಿನಲ್ಲೇ ಅತ್ಯಂತ ದೊಡ್ಡದಾದ ತೋಂ ಕೌನ್ ಸೆ ಎಂಬ ಗುಹಾ ನದಿಯಲ್ಲಿ ಜಲಪ್ರಯಾಣ, ಮೀನು ಹಿಡಿಯುವುದು, ನದೀ ತೀರದಲ್ಲಿ ವಿಶ್ರಾಂತಿ ಇವೆಲ್ಲವೂ ಲಾವೋಸ್ ನೀಡುವ ಮಿಗಿಲಾದ ಅನುಭವಗಳಾಗಿವೆ.ಪ್ರಯಾಣ ಹೇಗೆ?ಸಿಂಗಪುರ್, ಏರ್‌ಲೈನ್ಸ್, ಏರ್ ಏಷ್ಯಾ, ಮಲಿಂಟೊ, ಸ್ಕೂಟ್ ವಿಮಾನಗಳು ಕೌಲಾಲಂಪುರ ದಾರಿಯಾಗಿ ಲಾವೋಸ್ ರಾಜಧಾನಿ ವಿಯಂಟಿನೆಗೆ ಸೇವೆ ಒದಗಿಸುತ್ತಿವೆ. ನೇರಾನೇರ ವಿಮಾನ ಸೌಲಭ್ಯವಿಲ್ಲ. ಲಾವೋ ಕಿಪ್ಪ್ ಸ್ಥಳೀಯ ಕರೆನ್ಸಿ, ಪ್ರವಾಸಿಗರಿಂದ ಯುಎಸ್ ಡಾಲರ್ ಸ್ವೀಕರಿಸಲಾಗುತ್ತದೆ. ಮೂರು ರಾತ್ರಿ, ನಾಲ್ಕು ಹಗಲನ್ನೊಳಗೊಂಡ ಪ್ರವಾಸಕ್ಕೆ ಒಬ್ಬರಿಗೆ ಸುಮಾರು 38,000 ರೂ. ಖರ್ಚಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News