ಬಿಹಾರದ ಮಹಾಘಟಬಂಧನ ಸೀಟು ಹಂಚಿಕೆ ಮಾ.22ಕ್ಕೆ ಬಹಿರಂಗ: ಶರದ್ ಯಾದವ್

Update: 2019-03-20 09:32 GMT

ಹೊಸದಿಲ್ಲಿ, ಮಾ.20: ಬಿಹಾರದ ಮಹಾಘಟಬಂಧನ(ಮಹಾಮೈತ್ರಿ)ದಲ್ಲಿ ಪಕ್ಷಗಳ ಮಧ್ಯೆದ ಸೀಟು ಹಂಚಿಕೆ ವಿಚಾರವನ್ನು ಮಾ.22 ರಂದು ಪತ್ರಿಕಾಗೋಷ್ಠಿ ಮೂಲಕ ಬಹಿರಂಗಪಡಿಸಲಾಗುವುದು ಎಂದು ಲೋಕ ತಾಂತ್ರಿಕ ಜನತಾದಳ(ಎಲ್‌ಜೆಡಿ)ಮುಖ್ಯಸ್ಥ ಶರದ್ ಯಾದವ್ ಹೇಳಿದ್ದಾರೆ.

ಕಾಂಗ್ರೆಸ್ ಸೀಟು ಹಂಚಿಕೆಗೆ ಸಂಬಂಧಿಸಿ ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿಯೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದೆ. ಬಿಹಾರ ಲೋಕಸಭೆಯಲ್ಲಿ 11 ಕ್ಷೇತ್ರಗಳನ್ನು ನೀಡಬೇಕೆಂದು ಹಠ ಹಿಡಿದಿದ್ದ ಕಾಂಗ್ರೆಸ್ ತನ್ನ ಪಟ್ಟು ಸಡಿಲಿಸಿದೆ ಎಂದು ಮೂಲಗಳು ತಿಳಿಸಿವೆ.

ಆರ್‌ಜೆಡಿ 20 ಕ್ಷೇತ್ರಗಳಲ್ಲಿ ಹಾಗೂ ಮೈತ್ರಿ ಪಕ್ಷಗಳು ಇನ್ನುಳಿದ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಕಾಂಗ್ರೆಸ್ 9 ಸೀಟುಗಳನ್ನು ಪಡೆಯಲಿದೆ. ಉಪೇಂದ್ರ ಕುಶ್ವಾಹಾ ನೇತೃತ್ವದ ಆರ್‌ಎಸ್‌ಎಲ್‌ಪಿ 4 ಕ್ಷೇತ್ರಗಳಲ್ಲಿ, ಜಿತನ್ ರಾಮ್ ಮಾಂಜಿ ಎಚ್‌ಎಎಂ ಮೂರು ಹಾಗೂ ಮುಕೇಶ್ ಸಹಾನಿಯವರ ವಿಕಾಶಸೀಲ ಇನ್ಸಾಫ್ ಪಾರ್ಟಿ ಹಾಗೂ ಶರದ್ ಯಾದವ್‌ರ ಎಲ್‌ಜೆಡಿ ತಲಾ 2 ಸೀಟುಗಳಲ್ಲಿ ಸ್ಪರ್ಧಿಸಲಿದೆ.

ಎಡ ಪಕ್ಷಗಳು ಮೈತ್ರಿಕೂಟದಲ್ಲಿ ಸ್ಥಾನ ಪಡೆದಿರುವ ಬಗ್ಗೆ ಖಚಿತವಾಗಿಲ್ಲ. ಸಿಪಿಐ ಹಾಗೂ ಸಿಪಿಎಂ ಬಿಹಾರದಲ್ಲಿ ಆರ್‌ಜೆಡಿಯೊಂದಿಗೆ ಮೈತ್ರಿಕೊಳ್ಳಲು ಬಯಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News