ದೇಶದ ಆರ್ಥಿಕ ಪ್ರಗತಿ ದರ ಕುಂಠಿತ: ಆರ್ ಬಿಐ ಮುಖ್ಯಸ್ಥರ ಜೊತೆ ಕಳವಳ ವ್ಯಕ್ತಪಡಿಸಿದ ಅರ್ಥಶಾಸ್ತ್ರಜ್ಞರು

Update: 2019-03-20 13:21 GMT

ಮುಂಬೈ, ಮಾ.20: ಭಾರತದ ಆರ್ಥಿಕತೆಯ ಪ್ರಗತಿ ದರ ಕುಗ್ಗಿರುವ ಬಗ್ಗೆ ಅರ್ಥಶಾಸ್ತ್ರಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಗತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿತ್ತೀಯ ನೀತಿಯನ್ನು ಜಾರಿಗೊಳಿಸುವ ಅಗತ್ಯತೆಯನ್ನು ಆರ್ ಬಿಐ ಮುಖ್ಯಸ್ಥರ ಜತೆ ಮಂಗಳವಾರ ನಡೆಸಿದ ಸಭೆಯಲ್ಲಿ ಪ್ರತಿಪಾದಿಸಲಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕೆಲ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ ಎಂದು reuters.com ವರದಿ ಮಾಡಿದೆ.

ಏಪ್ರಿಲ್ 4ರಂದು ನಡೆಯುವ ವಿತ್ತೀಯ ನೀತಿ ಸಮಿತಿಯ ಸಭೆ ಹಿನ್ನೆಲೆಯಲ್ಲಿ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಹತ್ತಕ್ಕೂ ಅಧಿಕ ಮಂದಿ ಅರ್ಥಶಾಸ್ತ್ರಜ್ಞರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿದರು.

ಆರ್ ಬಿಐ ಪರಿಗಣಿಸಬಹುದಾದ ದರ ಕಡಿತ ಪ್ರಮಾಣದ ಬಗ್ಗೆ ನಿರ್ದಿಷ್ಟವಾಗಿ ಅರ್ಥಶಾಸ್ತ್ರಜ್ಞರು ಏನನ್ನೂ ಹೇಳಿಲ್ಲ ಎನ್ನಲಾಗಿದೆ. ಈ ಪೈಕಿ ಒಬ್ಬರು 50 ಮೂಲ ಅಂಶಗಳಷ್ಟು ಪ್ರಮಾಣ ಕಡಿತಗೊಳಿಸುವಂತೆ ಸಲಹೆ ಮಾಡಿದ್ದರು ಎಂದು ತಿಳಿದುಬಂದಿದೆ.

ದೇಶದಲ್ಲಿ ವಿತ್ತೀಯ ವಿಸ್ತರಣೆಗೆ ಅವಕಾಶ ಸೀಮಿತವಾಗಿರುವ ಹಿನ್ನೆಲೆಯಲ್ಲಿ ಪ್ರಗತಿಗೆ ಉತ್ತೇಜನ ನೀಡುವ ವಿತ್ತೀಯ ನೀತಿ ಅಗತ್ಯವಿದೆ ಎಂದು ಬಹಳಷ್ಟು ಮಂದಿ ಅರ್ಥಶಾಸ್ತ್ರಜ್ಞರು ಪ್ರತಿಪಾದಿಸಿದರು ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News