ಪ್ರೋ. ಬಸವರಾಜ್ ಗೆ ಪಿ.ಎಚ್.ಡಿ ಪದವಿ ಪ್ರದಾನ

Update: 2019-03-21 13:17 GMT

ಭಟ್ಕಳ: ಇಲ್ಲಿನ ಅಂಜುಮಾನ್ ಹಾಮಿಯೆ ಮುಸ್ಲಿಮಿನ್ ಶಿಕ್ಷಣ ಸಂಸ್ಥೆಯ ಅಂಜುಮಾನ್ ತಾಂತ್ರಿಕ ಕಾಲೇಜಿನ ಯಾಂತ್ರಿಕ ವಿಭಾಗದ ಸಹಾಯಕ  ಪ್ರಾಧ್ಯಾಪಕರಾದ ಪ್ರೊ. ಬಸವರಾಜ್ ಎಂ. ವಿ. ಅವರು ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಉದಯ ಪ್ರಸನ್ನ ಎಚ್. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಇನ್ವೆಸ್ಟಿಗೇಷನ್ ಇಂಟು ಕ್ರೀಪ್ ಆ್ಯಂಡ್ ವಿಯರ್ ಪ್ರಾಪರ್ಟೀಸ್ ಆಫ್ ಆಸ್ಟೆಂಪರ್ಡ್ ಹೈ ಸಿಲಿಕಾನ್ ಸ್ಡೀಲ್ ” ಎಂಬ ಸಂಶೋಧನಾ ಪ್ರಬಂಧಕ್ಕೆ  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ಬೆಳಗಾವಿ) ಪಿ.ಎಚ್. ಡಿ. ಪದವಿಯನ್ನು ನೀಡಿ ಗೌರವಿಸಿದೆ.

ಇವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿರುವ ಅಂಜುಮಾನ್ ತಾಂತ್ರಿಕ ಮಹಾವಿದ್ಯಾಲಯದ ಸಂಶೋಧನಾ ವಿಭಾಗದಲ್ಲಿ ಅಧ್ಯಯನ ನೆಡೆಸಿರುತ್ತಾರೆ.

ಡಾ. ಬಸವರಾಜ್ ಎಂ. ವಿ. ರವರು ಮೂಲತಃ ದಾವಣಗೆರೆ ಜಿಲ್ಲಾ ಚನ್ನಗಿರಿ ತಾಲ್ಲೂಕಿನ ಆಲೂರು ಗ್ರಾಮದ ರುದ್ರಮ್ಮ ಮತ್ತು ದಿ. ಶ್ರೀ ವೀರಪ್ಪ ಇವರ ಪುತ್ರ. ಕಳೆದ 21 ವರ್ಷಗಳಿಂದ ಅಂಜುಮಾನ್ ತಾಂತ್ರಿಕ ಕಾಲೇಜಿನ ಯಾಂತ್ರಿಕ ವಿಭಾಗದಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪ-ಪ್ರಾಚಾರ್ಯರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News