ಮಾ.22ರಿಂದ ಮಲಬಾರ್‌ನಲ್ಲಿ ಆರ್ಟಿಸ್ಟ್ರಿ ಕಲಾತ್ಮಕ ಆಭರಣಗಳ ಪ್ರದರ್ಶನ

Update: 2019-03-21 13:36 GMT

ಉಡುಪಿ, ಮಾ.21: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಆರ್ಟಿಸ್ಟ್ರಿ ಕಲಾತ್ಮಕ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮಾ. 22ರಿಂದ 28ರವರೆಗೆ ನಡೆಯಲಿದೆ.

ಈ ಪ್ರದಶನದಲ್ಲಿ ಮೈನ್ (ವಜ್ರಾಭಾರಣಗಳ ಅಭೂತ ಪೂರ್ವ ಸಂಗ್ರಹ, ನವ ವಧುವಿನ ವಿಶಿಷ್ಟ ಸಂಗ್ರಹಗಳು, ಐಜಿಐ ಪ್ರಮಾಣಕೃತ ವಜ್ರಾಭಾರಣ ಗಳು), ಡಿವೈನ್ (ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ಆಭರಣಗಳು), ಪ್ರಿಶಿಯ(ರುಬಿ ಎಂರಾಲ್ಡ್ ಅಮೂಲ್ಯ ಹರಳುಗಳ ಸಮಕಾಲೀನ ಚಿನ್ನಾಭರಣ ಗಳು), ಎಥಿನಿಕ್ಸ್ (ಕರಕುಶಲತೆಯ ಸೊಬಗಿನ ಪರಂಪರಿಕ ಆಭರಣಗಳು), ಏರ (ಆನ್ಕಟ್ ಡೈಮಂಡ್ಸ್ ಆಭರಣಗಳ ಅಪೂರ್ವ ಸಂಗ್ರಹ), ಹಾಯ್ ( ಯುವತಿಯರ ಮನಮೋಹಕ ಆಭರಣಗಳು), ಸ್ಟಾರ್ಲೆಟ್(ಚಿಕ್ಕ ಮಕ್ಕಳ ಅತ್ಯಾಕರ್ಷಕ ವಿನ್ಯಾಸಗಳಿಂದ ಕೂಡಿದ ಆಭರಣಗಳು) ಪ್ರಮುಖ ಆಕರ್ಷಣೆ ಯಾಗಿದೆ.

ಶೇ.100 ಬಿಐಎಸ್ ಹಾಲ್ ಮಾರ್ಕ್ ಗುರುತಿನ ಆಭರಣಗಳು ಐಜಿಐ ಪ್ರಮಾಣೀಕೃತ ವಜ್ರಾಭರಣಗಳು, ಬೆಳ್ಳಿಯ ಎಲ್ಲಾ ಆಭರಣಗಳು ಸಹ ಹಾಲ್ ಮಾರ್ಕ್ ಹೊಂದಿದೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ ಪ್ರತಿ ಗ್ರಾಂ ಚಿನ್ನಾಭರಣ ಗಳ ಮೇಕಿಂಗ್ ಚಾರ್ಜಸ್‌ನಲ್ಲಿ 125ರೂ. ಕಡಿತ ಮತ್ತು ವಜ್ರದ ಮೌಲ್ಯದ ಮೇಲೆ ಶೇ.10ರಷ್ಟು ಕಡಿತ ಹಾಗೂ ಬ್ರಾಂಡೆಡ್ ವಾಚ್ ಮೇಲೆ ವಿಶೇಷ ಕಡಿತ ಇರುತ್ತದೆ ಎಂದು ಉಡುಪಿ ಶಾಖೆ ವ್ಯವಸ್ಥಾಪಕ ಹಫೀಝ್ ರಹ್ಮಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News