ಎಸೆಸೆಲ್ಸಿ ಪರೀಕ್ಷೆ: ಬಂಟ್ವಾಳ ತಾಲೂಕಿನಲ್ಲಿ 60 ವಿದ್ಯಾರ್ಥಿಗಳು ಗೈರು

Update: 2019-03-21 13:37 GMT

ಬಂಟ್ವಾಳ, ಮಾ. 21: ಎಸೆಸೆಲ್ಸಿ ಪರೀಕ್ಷೆಗೆ ನೋದಾಯಿಸಿಕೊಂಡಿದ್ದವರಲ್ಲಿ ಬಂಟ್ವಾಳ ತಾಲೂಕಿನಲ್ಲಿ 60 ಮಂದಿ ಗೈರುಹಾಜರಿಯಾಗಿದ್ದಾರೆ. 

ತಾಲೂಕಿನಲ್ಲಿ ಒಟ್ಟು 5625 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿದ್ದು, ಇವರಲ್ಲಿ 2956 ಬಾಲಕರು ಮತ್ತು 2669 ಬಾಲಕಿಯರು ಇದ್ದಾರೆ. ಗುರುವಾರ ನಡೆದ ಪ್ರಥಮ ಭಾಷಾ ಕನ್ನಡ ಪರೀಕ್ಷೆಗೆ 5,250 ಮಂದಿ ಹಾಜರಾಗಬೇಕಿತ್ತು. ಆದರೆ, 60 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಇವರಲ್ಲಿ 40 ಹುಡುಗರು, 20 ಹುಡುಗಿಯರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಮಾಹಿತಿ ನೀಡಿದರು.

17 ಕೇಂದ್ರಗಳಲ್ಲಿ 17 ಮುಖ್ಯ ಅಧೀಕ್ಷಕರು, 9 ಉಪಮುಖ್ಯ ಅಧೀಕ್ಷಕರು, 17 ಕಸ್ಟೋಡಿಯನ್ಸ್, 25 ಸ್ಥಾನಿಕ ಜಾಗೃತ ದಳ, 350 ಕೊಠಡಿ ಮೇಲ್ವಿಚಾರ ಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತಲೂ ಪೊಲೀಸ್ ಭದ್ರತೆ ಇದ್ದು, ನಿಷೇಧಾಜ್ಞೆ ಹೇರಲಾಗಿದೆ. ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಶಿವಪ್ರಕಾಶ್ ಮಾಹಿತಿ ನೀಡಿದರು.

ಕಾವಳಪಡೂರು ವಗ್ಗ ಸರಕಾರಿ ಪದವಿಪೂರ್ವ ಕಾಲೇಜುವಿನಲ್ಲಿ ಸ್ವಾಗತ ಕೋರುವ ಕಮಾನು ಹಾಗೂ ಬ್ಯಾನರ್ ಗಮನ ಸೆಳೆದರೆ, ಮೊಂಟೆಪದವು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೆಖೆಯಿಂದ ಬಳಲದಂತೆ ವಿದ್ಯಾರ್ಥಿಗಳಿಗೆ ಪಾನೀಯ ವ್ಯವಸ್ಥೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News