ಭಟ್ಕಳ: ಎಸ್ಸೆಸ್ಸೆಲ್ಸಿ ಪ್ರಥಮ ಬಾಷೆಗೆ ಪರೀಕ್ಷೆಗೆ 13 ವಿದ್ಯಾರ್ಥಿಗಳು ಗೈರು

Update: 2019-03-21 13:49 GMT

ಭಟ್ಕಳ: ಇಂದು ನಡೆದ ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಪರೀಕ್ಷೆಯು ಸುಗಮವಾಗಿ ನಡೆದಿದ್ದು ಒಟ್ಟು 13 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆಂದು ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ  ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇಂದು ನಡೆದ ಪ್ರಥಮ ಭಾಷೆ ಕನ್ನಡ, ಉರ್ದು ಮತ್ತು ಇಂಗ್ಲಿಷ್ ಭಾಷೆ ವಿಷಯದಲ್ಲಿ 918 ಬಾಲಕರು ಹಾಗೂ 1000 ಬಾಲಕಿಯರು ಒಟ್ಟು 1918 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಕಟ್ಟೆಚ್ಚರವನ್ನು ವಹಿಸಲಾಗಿದ್ದು, ತಾಲೂಕಿನ 9 ಪರೀಕ್ಷಾ ಕಂದ್ರಗಳಲ್ಲಿ ಇಂದು ಪರೀಕ್ಷೆಗಳು ಸುಗಮವಾಗಿ ನೆರವೇರಿದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News