ನೀರವ್ ಮೋದಿಗೆ ಇಂಗ್ಲೆಂಡ್‌ನಲ್ಲಿ ಪ್ರತ್ಯೇಕ ಸೆಲ್

Update: 2019-03-21 18:09 GMT

ಹೊಸದಿಲ್ಲಿ, ಮಾ. 21: ಇಂಗ್ಲೆಂಡ್ ನ್ಯಾಯಾಲಯ ಮಾರ್ಚ್ 29ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾದ ವಜ್ರೋದ್ಯಮಿ ನೀರವ್ ಮೋದಿ ಅವರನ್ನು ಪಶ್ಚಿಮ ಯುರೋಪಿಯನ್ ಅತಿ ದೊಡ್ಡ ಕಾರಾಗೃಹಗಳಲ್ಲಿ ಒಂದಾದ ವಾಂಡ್ಸ್‌ವರ್ಥ್‌ನ ಹರ್ ಮೆಜೆಸ್ಟಿ ಕಾರಾಗೃಹದ ಪ್ರತ್ಯೇಕ ಸೆಲ್‌ಗಳಲ್ಲಿ ಇರಿಸುವ ಸಾಧ್ಯತೆ ಇದೆ.

ಲಂಡನ್‌ನ ದಕ್ಷಿಣದಲ್ಲಿರುವ ಈ ಕಾರಾಗೃಹದಲ್ಲಿ 48ರ ಹರೆಯದ ಮೋದಿಯ ಸಹ ಕೈದಿಗಳಲ್ಲಿ ದಾವೂದ್ ಇಬ್ರಾಹಿಂನ ಅನುಯಾಯಿಯಾಗಿರುವ ಪಾಕಿಸ್ತಾನ ಮೂಲದ ಜಾಬಿರ್ ಮೋತಿ ಕೂಡ ಒಬ್ಬನಾಗಿರಲಿದ್ದಾನೆ. ಪ್ರಸ್ತುತ ಮೋತಿಯನ್ನು ಅಮೆರಿಕಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ವೆಸ್ಟ್ ಎಂಡ್‌ನ ಸೆಂಟರ್ ಪಾಯಿಂಟ್‌ನ ಪ್ಲಶ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ನೀರವ್ ಮೋದಿ ಯನ್ನು ಗುರುವಾರ ಪೊಲೀಸರು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News