ಬಾಂಗ್ಲಾದೇಶಿ ವಲಸಿಗರನ್ನು ಗೆದ್ದಲಿಗೆ ಹೋಲಿಸಿದ ಅಮಿತ್ ಶಾ: ಅಮೆರಿಕ ಮಾನವ ಹಕ್ಕು ಇಲಾಖೆ ಆಕ್ರೋಶ

Update: 2019-03-21 18:09 GMT

ಹೊಸದಿಲ್ಲಿ,ಮಾ.21: ಅಸ್ಸಾಂನಲ್ಲಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರನ್ನು ಗೆದ್ದಲಿಗೆ ಹೋಲಿಸಿರುವ ಬಿಜೆಪಿ ನಾಯಕ ಅಮಿತ್ ಶಾ ವಿರುದ್ಧ ಅಮೆರಿಕದ ಮಾನವ ಹಕ್ಕು ಇಲಾಖೆ ಸೇರಿದಂತೆ ಜಗತ್ತಿನಾದ್ಯಂತದ ಮಾನವ ಹಕ್ಕುಗಳ ವಿಭಾಗ ಆಕ್ರೋಶ ವ್ಯಕ್ತಪಡಿಸಿದ್ದು ಭಾರತದಲ್ಲಿ ಚುನಾವಣೆಗೂ ಮುನ್ನ ನಿರಾಶ್ರಿತವಿರೋಧಿ ಹೇಳಿಕೆಗಳಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ. 

ಕಳೆದ ವಾರ ಮಾನವ ಹಕ್ಕುಗಳ 2018ರ ವರದಿಯನ್ನು ಅಮೆರಿಕ ಕಾರ್ಯದರ್ಶಿ ಮೈಕ್ ಪೊಂಪಿಯೊ ಬಿಡುಗಡೆ ಮಾಡಿದ್ದು, ಜಗತ್ತಿನಾದ್ಯಂತವಿರುವ ನಮ್ಮ ಕೆಲವು ಸ್ನೇಹಿತರು, ಮಿತ್ರರು ಮತ್ತು ಜೊತೆಗಾರರು ಕೂಡಾ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ. ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕತ್ವ ನೋಂದಣಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 24ರಂದು ಹೇಳಿಕೆ ನೀಡಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅಸ್ಸಾಂನಲ್ಲಿರುವ ಬಾಂಗ್ಲಾದೇಶಿ ವಲಸಿಗರು ಗೆದ್ದಲುಗಳಾಗಿದ್ದು ಅವರನ್ನು ನಾಗರಿಕ ಪಟ್ಟಿಯಿಂದ ಅಳಿಸಿ ಹಾಕಲಾಗುವುದು ಎಂದು ಹೇಳಿಕೆ ನೀಡಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News