ಗಂಡಿಬಾಗಿಲು ಎಸ್‍ಕೆಎಸ್‍ಬಿವಿಯಿಂದ ಜಲನಿಧಿ ಅಭಿಯಾನ

Update: 2019-03-22 08:48 GMT

ಉಪ್ಪಿನಂಗಡಿ: ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾತೊರೆಯುವ ಈ ದಿನಗಳಲ್ಲಿ ಸಾರ್ವಜನಿಕರ ದಾಹ ನೀಗಿಸುವುದರ ಜೊತೆಗೆ ಪ್ರಾಣಿ-ಪಕ್ಷಿಗಳ ದಾಹ ತಣಿಸುವ ಸೇವೆ ಅತ್ಯಂತ ಪುಣ್ಯದ ಕೆಲಸ ಎಂದು ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಸೆಯ್ಯದ್ ಅನಸ್ ತಂಙಳ್ ಹೇಳಿದರು.

ಅವರು ಮಾ. 22ರಂದು ಗಂಡಿಬಾಗಿಲು ಹಿಮಾಯತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ಸಂಘಟನೆ ಎಸ್.ಕೆ.ಎಸ್.ಬಿ.ವಿ. ವತಿಯಿಂದ ಸಾರ್ವಜನಿಕರಿಗೆ ಹಾಗೂ ಪ್ರಾಣಿ-ಪಕ್ಷಿಗಳಿಗಾಗಿ  ಹಮ್ಮಿಕೊಳ್ಳಲಾದ ಕುಡಿಯವ ನೀರು ಜಲನಿಧಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ದಿನೇ ದಿನೇ ಉಷ್ಟಾಂಶ ಏರುತ್ತಲೇ ಇದ್ದು, ಜನರ ದಾಹ ಅಧಿಕವಾಗುತ್ತಿದೆ, ಅದರಲ್ಲೂ ಪ್ರಾಣಿ-ಪಕ್ಷಿಗಳಂತೂ ನೀರಿಗಾಗಿ ಹಾತೊರೆಯುತ್ತಿರುತ್ತದೆ, ಬೇಸಿಗೆಯಲ್ಲಿ ಬಹಳಷ್ಟು  ಪ್ರಾಣಿ-ಪಕ್ಷಿಗಳು ದಾಹದಿಂದಾಗಿಯೇ ಪ್ರಾಣಿ ಬಿಡುತ್ತಿರುತ್ತದೆ, ಬಹಳಷ್ಟು ಪಕ್ಷಿಗಳ ಸಂತತಿಯೇ ನಾಶವಾಗಿದೆ, ಇಂತಹ ಸಂದರ್ಭದಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ವ್ಯವಸ್ಥೆಯ ಮೂಲಕ ಅದರ ಉಳಿವಿಗೆ ನಾವುಗಳು ಪಣತೊಡಬೇಕು ಜೊತೆಗೆ ನೀರು ಮಿತವಾಗಿ ಬಳಸುವ ಮೂಲಕ ಜನರಲ್ಲಿ ನೀರಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಮದ್ರಸದ ಸದರ್ ಮುಅಲ್ಲಿಂ ಮೂಸಾ ಮುಸ್ಲಿಯಾರ್ ಸಂದರ್ಭೋಚಿತವಾಗಿ ಮಾತನಾಡಿ ಇಂದಿನ ಪುಟ್ಟ ಮಕ್ಕಳಿಗೆ ನೀರಿನ ಮಹತ್ವದ ಬಗ್ಗೆ ಅರಿವು ಕಡಿಮೆ ಇದೆ, ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲೂ ಜಾಗೃತಿ ಮೂಡಿಸಬೇಕಾಗಿದೆ ಎಂದು ಶುಭ ಹಾರೈಸಿದರು. 

ಕುತುಬಿಯ್ಯಾ ಜುಮಾ ಮಸೀದಿ ಸಮಿತಿ ಕಾರ್ಯದರ್ಶಿ ಜಿ. ಮಹಮ್ಮದ್ ರಫೀಕ್, ಜೊತೆ ಕಾರ್ಯದರ್ಶಿಗಳಾ ಅಬ್ದುಲ್ ರಝಾಕ್ ಮರ್ವೇಲ್, ಜಿ. ಅಬ್ದುಲ್ ರಝಾಕ್, ಗಂಡಿಬಾಗಿಲು ಎಸ್‍ಕೆಎಸ್‍ಎಸ್‍ಎಫ್ ಘಟಕದ ಅಧ್ಯಕ್ಷ ಎಸ್.ಪಿ. ಖಲಂದರ್, ಕಾರ್ಯದರ್ಶಿ ಆಶಿಫ್ ಗಂಡಿಬಾಗಿಲು ಮತ್ತಿತರರು ಉಪಸ್ಥಿತರಿದ್ದರು.

 ಹಿಮಾಯತುಲ್ ಇಸ್ಲಾಂ ಮದ್ರಸದ ಮುಅದ್ದಿಂ ರಫೀಕ್ ಮುಸ್ಲಿಯಾರ್ ಸ್ವಾಗತಿಸಿ, ಆರಿಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News