ಬಿಎಸ್ಪಿ ಪ್ರಥಮ ಪಟ್ಟಿ ಪ್ರಕಟ: ಈ ಕ್ಷೇತ್ರದಿಂದ ದಾನಿಶ್ ಅಲಿ ಸ್ಪರ್ಧೆ

Update: 2019-03-22 15:02 GMT

ಹೊಸದಿಲ್ಲಿ, ಮಾ.22: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ 11 ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಹುಜನ ಸಮಾಜ ಪಕ್ಷ(ಬಿಎಸ್ಪಿ) ಶುಕ್ರವಾರ ಬಿಡುಗಡೆಗೊಳಿಸಿದ್ದು, ಇತ್ತೀಚೆಗಷ್ಟೇ ಜೆಡಿಎಸ್‌ನಿಂದ ಸೇರ್ಪಡೆಗೊಂಡಿದ್ದ ದಾನಿಶ್ ಅಲಿಗೆ ಅಮ್ರೋಹ ಕ್ಷೇತ್ರದ ಟಿಕೆಟ್ ನೀಡಲಾಗಿದೆ.

ಮಹತ್ವದ ಸಹಾರನ್‌ಪುರ ಕ್ಷೇತ್ರದಲ್ಲಿ ಬಿಜೆಪಿಯ ರಾಘವ್ ಲಖನ್‌ಪಾಲ್ ಎದುರು ಸ್ಥಳೀಯ ಉದ್ಯಮಿ ಫಝ್ಲೂರ್ ರ್ರಹ್ಮಾನ್ ಬಿಎಸ್ಪಿಯಿಂದ ಸ್ಪರ್ಧಿಸಲಿದ್ದಾರೆ. ಸಹಾರನ್‌ಪುರದಲ್ಲಿ ನಡೆದಿದ್ದ ಹಿಂಸಾಚಾರ ಘಟನೆಗೆ ಲಖನ್‌ಪಾಲ್ ಉತ್ತೇಜನ ನೀಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಚುನಾವಣೆಯ ಫಲಿತಾಂಶ ಕುತೂಹಲ ಕೆರಳಿಸಿದೆ. ಅಲ್ಲದೆ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ನಗೀನಾ, ಬುಲಂದ್‌ಶಹರ್ ಮತ್ತು ಆಗ್ರಾ ಕ್ಷೇತ್ರಗಳಲ್ಲಿ ಕ್ರಮವಾಗಿ ಗಿರೀಶ್ ಚಂದ್ರ, ಯೋಗೇಶ್ ವರ್ಮ ಹಾಗೂ ಮನೋಜ್ ಕುಮಾರ್‌ಗೆ ಟಿಕೆಟ್ ನೀಡಲಾಗಿದೆ.

ಸಮಾಜವಾದಿ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಬಿಎಸ್ಪಿ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದರೆ ಸಮಾಜವಾದಿ ಪಕ್ಷ 37 ಸ್ಥಾನದಲ್ಲಿ ಸ್ಪರ್ಧಿಸಲಿದೆ. ರಾಷ್ಟ್ರೀಯ ಲೋಕದಳಕ್ಕೆ 3 ಸ್ಥಾನ ನೀಡಲಾಗಿದೆ. ಅಮೇಥಿ ಮತ್ತು ರಾಯ್‌ಬರೇಲಿ ಕ್ಷೇತ್ರದಲ್ಲಿ ಸ್ಪರ್ಧಿಗಳನ್ನು ಕಣಕ್ಕಿಳಿಸದೆ ಕಾಂಗ್ರೆಸ್‌ಗೆ ಬಿಟ್ಟುಕೊಡಲು ತೀರ್ಮಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News