ಯಾಸಿನ್ ಮಲಿಕ್ ನೇತೃತ್ವದ ಸಂಘಟನೆ ಜೆಕೆಎಲ್‌ಎಫ್‌ಗೆ ನಿಷೇಧ

Update: 2019-03-22 15:39 GMT

ಹೊಸದಿಲ್ಲಿ, ಮಾ. 22: ಯಾಸಿನ್ ಮಲಿಕ್ ನೇತೃತ್ವದ ಜೆಕೆಎಲ್‌ಎಫ್ ಅನ್ನು ಭಯೋತ್ಪಾದಕ ವಿರೋಧಿ ಕಾಯ್ದೆ ಅಡಿಯಲ್ಲಿ ಕೇಂದ್ರ ಸರಕಾರ ಶುಕ್ರವಾರ ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಜಮ್ಮು ಹಾಗೂ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ಉತ್ತೇಜಿಸುತ್ತಿರುವ ಹಿನ್ನೆಲೆಯಲ್ಲಿ ಜೆಕೆಎಲ್‌ಎಫ್‌ಗೆ ನಿಷೇಧ ಹೇರಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾನೂನು ಬಾಹಿರ ಚುಟುವಟಿಕೆ (ತಡೆ) ಕಾಯ್ದೆಯ ವಿವಿಧ ನಿಯಮಗಳ ಅಡಿಯಲ್ಲಿ ಜೆಕೆಎಲ್‌ಎಫ್ ಮೇಲೆ ನಿಷೇಧ ಹೇರಲಾಗಿದೆ. ಜೆಕೆಎಲ್‌ಎಫ್‌ನ ವರಿಷ್ಠ ಯಾಸಿನ್ ಮಲಿಕ್‌ರನ್ನು ಬಂಧಿಸಲಾಗಿದ್ದು, ಅವರನ್ನು ಪ್ರಸ್ತುತ ಜಮ್ಮುವಿನ ಕೋಟ್ ಬಲ್ವಾಲ್ ಜೈಲಿನಲ್ಲಿ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಈ ತಿಂಗಳಲ್ಲಿ ನಿಷೇಧಕ್ಕೆ ಒಳಗಾಗುತ್ತಿರುವ ಎರಡನೇ ಸಂಘಟನೆ ಜೆಕೆಎಲ್‌ಎಫ್. ಈ ಹಿಂದೆ ಕೇಂದ್ರ ಸರಕಾರ ಜಮ್ಮು ಹಾಗೂ ಕಾಶ್ಮೀರದ ಜಮಾತೆ ಇಸ್ಲಾಮಿ ಸಂಘಟನೆ ಮೇಲೆ ನಿಷೇಧ ಹೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News