ಹಣ ಅಕ್ರಮ ವರ್ಗಾವಣೆ ಪ್ರಕರಣ: ಝಾಕಿರ್ ನಾಯ್ಕ್ ನಂಬಿಕಸ್ತ ಸಹಚರನ ಬಂಧನ

Update: 2019-03-22 18:01 GMT

ಹೊಸದಿಲ್ಲಿ, ಮಾ. 22: ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ರಿಗೆ ಸಂಬಂಧ ಹೊಂದಿದ ಕಂಪೆನಿಗಳಲ್ಲೊಂದರ ನಿರ್ದೇಶಕ ಹಾಗೂ ಅವರ ‘ನಂಬಿಕಸ್ತ ಸಹಚರ’ ಎಂದು ಹೇಳಲಾದ ಅಬ್ದುಲ್ ಖಾದಿರ್ ನಜೀಮುದ್ದೀನ್‌ ಎಂಬವರನ್ನು ಶುಕ್ರವಾರ ಬಂಧಿಸಿದೆ.

ಮುಂಬೈಯ ವಿಶೇಷ ನ್ಯಾಯಾಲಯ ನಜೀಮುದ್ದೀನ್ ಅವರನ್ನು ಮಾರ್ಚ್ 27ರ ವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಿದೆ.

ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (ಐಆರ್‌ಎಫ್) ಹಾಗೂ ಇತರರ 18.38 ಕೋಟಿ ರೂಪಾಯಿ ಮೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡ ಒಂದು ವಾರಗಳ ಬಳಿಕ ಜಾರಿ ನಿರ್ದೇಶನಾಲಯ ಅಬ್ದುಲ್ ಖಾದಿರ್ ನಜೀಮುದ್ದೀನ್‌ರನ್ನು ಬಂಧಿಸಿದೆ.

  ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಬಂಧಿಸುತ್ತಿರುವ ಎರಡನೇ ವ್ಯಕ್ತಿ ಇವರು. ಆರಂಭದಲ್ಲಿ ಜಾರಿ ನಿರ್ದೇಶನಾಲಯ ನಾಯ್ಕ್ ನಿಕಟವರ್ತಿ ಅಮೀರ್ ಅಬ್ದುಲ್ ಎಂ. ಗಝ್ದರ್‌ರನ್ನು ಬಂಧಿಸಿತ್ತು. ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News