ಮಾ.24: ಶಂಸುಲ್ ಉಲಮಾ ಹಿಫ್ಲುಲ್ ಕಾಲೇಜು ಉದ್ಘಾಟನೆ, ಹಾಫಿಝೀನ್ ಸನದುದಾನ ಸಮಾರಂಭ

Update: 2019-03-23 12:40 GMT

ಪುತ್ತೂರು: ಕರ್ನಾಟಕ ಇಸ್ಲಾಮಿಕ್ ಅಕಾಡಮಿ ವತಿಯಿಂದ ಕುಂಬ್ರದಲ್ಲಿ ನಿರ್ಮಿಸಲಾದ ಶಂಸುಲ್ ಉಲಮಾ ಹಿಫ್ಲುಲ್ ಕಾಲೇಜು ನೂತನ ಕಟ್ಟಡದ ಉದ್ಘಾಟನೆ ಹಾಗೂ ಹಾಫಿಝೀನ್ ಸನದುದಾನ ಸಮಾರಂಭ ಮಾ.24ರಂದು ಸಂಜೆ ಕುಂಬ್ರದ ಕೆಐಸಿ ಕ್ಯಾಂಪಸ್‍ನಲ್ಲಿ ನಡೆಯಲಿದೆ ಎಂದು ಕೆಐಸಿ ಸಂಘಟನಾ ಕಾರ್ಯದರ್ಶಿ ಅನೀಸ್ ಕೌಸರಿ ತಿಳಿಸಿದ್ದಾರೆ.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕುಂಬ್ರ ಕೆಐಸಿ ನಿರ್ದೇಶಕ ಸೈಯದ್ ಅಲಿ ತಂಙಳ್ ಕುಂಬೋಳ್ ದುವಾ ಮಾಡಲಿದ್ದಾರೆ. ನೂತನ ಕಾಲೇಜು ಕಟ್ಟಡವನ್ನು ದುಬೈ ಎಂ. ಸ್ಕ್ವಾರ್ ಇಂಜಿನಿಯರಿಂಗ್ ಕನ್ಸಲ್ಟೆನ್ಸ್ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಮುಸ್ತಫಾ ಉದ್ಘಾಟಿಸಲಿದ್ದಾರೆ. ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗದದ ಅಧ್ಯಕ್ಷ ಝಫರುಲ್ಲಾ ಖಾನ್ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಲಿದ್ದಾರೆ. ಭಾರತ್ ಕಸ್ಟ್ರಕ್ಷನ್ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ಮುಸ್ತಫಾ ಕಚೇರಿ ಉದ್ಘಾಟಿಸಲಿದ್ದಾರೆ.  

ಹಾಫಿಝೀನ್ ಸನದುದಾನ ಸಮಾರಂಭದ ಅಧ್ಯಕ್ಷತೆಯನ್ನು ಕುಂಬ್ರ ಕೆಐಸಿ ಅಧ್ಯಕ್ಷರಾದ ಕೆ.ಪಿ. ಅಹ್ಮದ್ ಆಕರ್ಷಣ್ ವಹಿಸಲಿದ್ದಾರೆ. ಕೆಐಸಿ ಯುಎಇ ಸಮಿತಿ ಅಧ್ಯಕ್ಷ ಮೊಹಿಯುದ್ದೀನ್ ಕುಟ್ಟಿ ಹಾಜಿ ದಿಬ್ಬ ಉದ್ಘಾಟಿಸಲಿದ್ದಾರೆ. ಕೋಝಿಕ್ಕೋಡ್ ಖಾಝಿ ಸೈಯದ್ ನಾಸಿರ್ ಅಬ್ದುಲ್ ಹಯ್ಯ್ ಶಿಹಾಬುದ್ದೀನ್ ತಂಙಳ್ ಪಾಣಕ್ಕಾಡ್ ಸನದು ಪ್ರಧಾನ ಮಾಡಲಿದ್ದಾರೆ. ಕೆಐಸಿ ಪ್ರಾಂಶುಪಾಲ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಪ್ರಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಖಲೀಲ್ ಹುದವಿ ಕಾಸರಗೋಡು ಮುಖ್ಯ ಭಾಷಣ ಮಾಡಲಿದ್ದಾರೆ. 

ಕಾರ್ಯಕ್ರಮದಲ್ಲಿ  ದುಬೈ ಎಂ. ಸ್ಕ್ವಾರ್ ಇಂಜಿನಿಯರಿಂಗ್ ಕನ್ಸಲ್ಟೆನ್ಸ್ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಮುಸ್ತಫಾ, ದುಬೈ ಝೆನ್ ಎಕ್ಸ್ ಸಿಸ್ಟಮ್ ವ್ಯವಸ್ಥಾಪಕ ನಿರ್ದೇಶಕ ಜಾಕಿರ್ ಹುಸೈನ್ ದೆಹಲಿ ಮತ್ತು ಭಾರತ್ ಕಸ್ಟ್ರಕ್ಷನ್ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ಮುಸ್ತಫಾ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಹಾಗೂ 16 ಹಾಫೀಝ್‍ಗಳನ್ನು ದುಬೈ ಕೆಐಸಿ ಅಧ್ಯಕ್ಷ ಅಶ್ರಫ್ ಶಾ ಮಾಂತೂರು ಸನ್ಮಾನಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಐಸಿ ಯುಎಇ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್, ಕೆಐಸಿ ವ್ಯವಸ್ಥಾಪಕ ಕೆಎಂಎ ಕೊಡುಂಗಾಯಿ ಫಾಝಿಲ್ ಹನೀಫಿ, ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಕೂರ್ನಡ್ಕ ಮತ್ತು ಕೆಐಸಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಾಬಿರ್ ಫೈಝಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News