ಶ್ರೀಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಬೀಳ್ಕೊಡುಗೆ

Update: 2019-03-23 11:58 GMT

ಮಂಗಳೂರು ಮಾ23: ಶಕ್ತಿನಗರದ ಶ್ರೀ ಗೋಪಾಲ ರ್ವ ಪ್ರಾಥಮಿಕ ಶಾಲೆಯ ಯುಕೆಜಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ಶನಿವಾರ ಶಕ್ತಿ ವಸತಿ ಶಾಲೆಯಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ಆಯೋಜನೆ ಮಾಡಲಾಗಿತ್ತು. ಯುಕೆಜಿಯ ಪ್ರತಿಯೊಬ್ಬ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ಕುರಿತಂತೆ ವಿದ್ಯಾರ್ಥಿಗಳ ಪೋಷಕರ ಮುಂದೆ ಕಿರುಪರಿಚಯದ ವಿಡಿಯೋ ಪ್ರದರ್ಶನ ನಡೆಸಲಾಯಿತು.

ಈ ಸಂದರ್ಭ ಪೋಷಕರಾದ ಪ್ರಕಾಶ ಕೆ. ಮಾತನಾಡಿ, ‘ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯು ನನ್ನ ಮಗುವಿನಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಪ್ರಯತ್ನವನ್ನು ಮಾಡಿದೆ. ಶೈಕ್ಷಣಿಕವಾಗಿ ಶೀಘ್ರವಾಗಿ ಬೆಳೆಯುವಂತೆ ಮಾಡಿದೆ. ಈ ಕಾರಣಗೋಸ್ಕರ ಇಲ್ಲಿನ ಅಧ್ಯಾಪಕಿಯರಿಗೆ ಅಭಿನಂದನೆ ಸಲ್ಲಿಸುವೆ ಎಂದರು.

ಮತ್ತೋರ್ವ ಪೋಷಕಿ ಅವಿನಾ ಎ. ನಾರಾಯಣ್ ಮಾತನಾಡಿ, ಇಲ್ಲಿನ ಅಧ್ಯಾಪಕಿಯವರು ವಿದ್ಯಾರ್ಥಿಗಳಲ್ಲಿನ ಒಳ್ಳೆಯ ಚಟುವಟಿಕೆಗಳನ್ನು ಗುರುತಿಸಿ ಆತ್ಮ ವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾತನಾಡಿದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ. ನಾಕ್, ಶಾಲೆ ಪ್ರಾರಂಭಿಸಿದ್ದು ನನ್ನ ಪ್ರಯತ್ನವಲ್ಲ. ಶ್ರೀ ಗೋಪಾಲಕೃಷ್ಣನ ಅನುಗ್ರಹದಿಂದ ಈ ಶಾಲೆ ಪ್ರಾರಂಭವಾಗಿದೆ. ಶಕ್ತಿ ಶಾಲೆಯು ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು ವಿದ್ಯಾರ್ಥಿಗಳನ್ನು ಸಮಾಜದ ಸಂಸ್ಕಾರಯುತ ವ್ಯಕ್ತಿಯನ್ನಾಗಿ ನಿರ್ಮಾಣ ಮಾಡುವ ಕನಸನ್ನು ಹೊತ್ತುಕೊಂಡು ಕೆಲಸವನ್ನು ಮಾಡುತ್ತಿದೆ. ಅಧ್ಯಾಪಕರು ವಿದ್ಯಾರ್ಥಿಗಳಲ್ಲಿ ಸರ್ವತೋಮುಖ ಬದಲಾವಣೆ ತರಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮನೋರಂಜನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಆಗಮಿಸಿರುವ ಶಕ್ತಿ ಶಿಕ್ಷಣ ಸಂಸ್ಥೆಯ ಸದಸ್ಯೆ ಸಗುಣ ಸಿ. ನಾಕ್ ಯುಕೆಜಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.
ವೇದಿಕೆಯಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್, ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲಕಿ ನೀಮಾ ಸಕ್ಸೇನಾ, ಪ್ರಧಾನ ಸಲಹೆಗಾರ ರಮೇಶ ಕೆ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಧ್ಯಾಪಕಿ ನೀಲಾ ವಿಜಯರಾವ್ ಸ್ವಾಗತಿಸಿದರು. ಮಮತಾ ಎಂ.ಎಸ್.ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News