ದ.ಕ ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿಗೆ 1,000 ಎಕ್ರೆ ಭೂಮಿಯ ಅಗತ್ಯವಿದೆ: ಸುಧಾಕರ ಎಸ್.ಶೆಟ್ಟಿ

Update: 2019-03-23 15:41 GMT

ಮಂಗಳೂರು,ಮಾ.23:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೈಗಾರಿಕಾಭಿವೃದ್ಧಿಗೆ ಒಂದು ಸಾವಿರ ಎಕ್ರೆ ಭೂಮಿಯ ಅಗತ್ಯವಿದೆ.ಇಲ್ಲಿನ ಕೈಗಾರಿಕಾ ಬೆಳವಣಿಗೆಗೆ ಲ್ಯಾಂಡ್ ಬ್ಯಾಂಕ್ ಇಲ್ಲದಿರುವುದು ದೊಡ್ಡ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಒಕ್ಕೂಟದ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ ಹೂಡಿಕೆ ಮಾಡಲು ಸಾಕಷ್ಟು ಉದ್ಯಮಿಗಳು ಸಿದ್ಧವಾಗಿದ್ದಾರೆ ಆದರೆ ಅವರಿಗೆ ಅಗತ್ಯವಿರುವ ಭೂಮಿ ದೊರೆಯುತ್ತಿಲ್ಲ. ಕಳೆದ 20ವರ್ಷಗಳಿಂದ ಕೈಐಡಿಬಿ ಕೈಗಾರಿಕೆಗೆ ಭೂಮಿ ಕಾಯ್ದಿರಿಸಲು ಯಾವೂದೇ ಕ್ರಮ ಕಯಗೊಳ್ಳದೆ ಇರುವುದರಿಂದ ಮತ್ತು ಜಿಲ್ಲೆಯಲ್ಲಿ ಭೂ ಬ್ಯಾಂಕ್ ಮಾಡುವ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದರಿಂದ ಕೈಗಾರಿಕೆಗೆ ಭೂಮಿಯ ಕೊರತೆ ಉಂಟಾಗಿದೆ ಎಂದು ಸುಧಾಕರ ಶೆಟ್ಟಿ ತಿಳಿಸಿದ್ದಾರೆ.

ಬೆಂಗಳೂರು ಮಾದರಿಯಲ್ಲಿ ಮಂಗಳೂರನ್ನು ಕೈಗಾರಿಕೆಯ ಅಭಿವೃದ್ಧಿ ದೃಷ್ಟಿಯಿಂದ ಪರಿಗಣಿಸಬೇಕಾಗಿದೆ.ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ರೀತಿ ವಿಕೇಂದ್ರೀಕರಣ ರೀತಿಯಲ್ಲಿ ಕೈಗಾರಿಕಾ ಅಭಿವೃದ್ಧಿಯಾಗಬೇಕಾಗಿದೆ. ರಾಜ್ಯದಲ್ಲಿ 300 ಕಿ.ಮೀ ಕರಾವಳಿ ತೀರವನ್ನು ಹೊಂದಿರುವ ಪ್ರಮುಖ ಕೇಂದ್ರವಾದ ಮಂಗಳೂರಿನಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಸಾಕಷ್ಟು ಅವಕಾಶ ಇದ್ದರೂ ನಿರ್ಲಕ್ಷಕ್ಕೆ ಈಡಾಗಿದೆ. ಈ ಬಗ್ಗೆ ಸರಕಾರ ಗಮನಹರಿಸಬೇಕು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಸುಧಾಕರ ಶೆಟ್ಟಿ ತಿಳಿಸಿದ್ದಾರೆ.

ಕೈಗಾರಿಕೆಗಳಿಗೆ ಬಳಸಲಾಗುತ್ತಿರುವ ನೀರಿನ ದರವನ್ನು 2018ರಿಂದ ಅವೈಜ್ಞಾನಿಕವಾಗಿ ಏರಿಸಲಾಗಿದೆ ನೀರಿನ ದರವನ್ನು ಪ್ರತಿ ಎಂ ಸಿಎಫ್‌ಟಿ ಗೆ ಹಿಂದೆ ಇದ್ದ 1800 ರುಗಳಿಂದ 1.50ಲಕ್ಷ ರೂಗಳಿಗೆ ಹಾಗೂ ಎರಡನೆ ವರ್ಗದಲ್ಲಿ 3200ರೂಗಳಿಂದ 3ಲಕ್ಷ ರೂಗಳಿಗೆ ಏರಿಸಲಾಗಿದೆ ಇದು ಕೈಗಾರಿಕೆಗಳಿಗೆ ದೊಡ್ಡ ಹೊರೆಯಾಗಿದೆ ಇದನ್ನು ಪುನ ರ್ ಪರಿಶೀಲಿಸಬೇಕು .ಅದೇ ರೀತಿ ಗ್ರಾಮ ಪಂಚಾಯತ್‌ಗಳಲ್ಲಿ ಕಾನೂನು ಮೀರಿ ದೊಡ್ಡ ಮೊತ್ತದ ತೆರಿಗೆಯನ್ನು ವಿಧಿಸಲಾಗುತ್ತಿದೆ ಇದನ್ನು ಕಡಿತಗೊಳಿಸಬೇಕು .ಎಪಿಎಂಸಿ ಎಪಿಎಂಸಿ ಯಿಂದ 1.5 ಶೇ ಸೆಸ್ ಈಗ ವಿಧಿಸಲಾಗುತ್ತಿದೆ ಇದನ್ನು ಕಡಿತಗೊಳಿಸಿ 1ಶೇ ಇಳಿಸಬೇಕು ಎಂದು ಸರಕಾರವನ್ನು ಆಗ್ರಹಿಸುವುದಾಗಿ ಎಂದು ಸುಧಾಕರ ಶೆಟ್ಟಿ ತಿಳಿಸಿದ್ದಾರೆ.

ಫೆ.2019ರಲ್ಲಿ ಬೆಂಗಳೂರಿನಲ್ಲಿ ನಡೆದ ಏಶ್ಯನ್ ಸಮ್ಮೇಳನದಲ್ಲಿ 23 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.ರಾಜ್ಯದಲ್ಲಿ 2ಲಕ್ಷ ಕೋಟಿ ರೂ ಬಂಡವಾಳ ಹೂಡುವ ಭರವಸೆ ವ್ಯಕ್ತವಾಗಿದೆ ಎಂದು ಸುಧಾಕರ ಶೆಟ್ಟಿ ತಿಳಿಸಿದ್ದಾರೆ.ಮುಂದಿನ ಜೂನ್ ತಿಂಗಳಲ್ಲಿ ಅನಿವಾಸಿ ಭಾರತೀಯರನ್ನು ರಾಜ್ಯದಲ್ಲಿ ಹೂಡಿಕೆ ಮಾಡಲು ಆಕರ್ಷಿಸುವ ದೃಷ್ಟಿಯಿಂದ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ. ಈ ಸಮ್ಮೇಳನದಲ್ಲಿ 60 ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸುಧಾಕರ ಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘಟನೆಳ ಒಕ್ಕೂಟದ ಉಪಾಧ್ಯಕ್ಷ ಜನಾರ್ದನ,ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್,ಉಪಾಧ್ಯಕ್ಷ ಐಸಾಕ್ ವಾಝ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News