'ಭಾರತ್ ಮಾತಾ ಕೀ ಜೈ' ಎನ್ನುವುದೇ ರಾಷ್ಟ್ರೀಯತೆಯಲ್ಲ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

Update: 2019-03-24 07:36 GMT

ಹೊಸದಿಲ್ಲಿ, ಮಾ.24: ‘ಭಾರತ್ ಮಾತಾ ಕೀ ಜೈ’ ಎಂದು ಹೇಳುವುದು ಮಾತ್ರ ರಾಷ್ಟ್ರೀಯತೆಯಲ್ಲ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಧರ್ಮ, ಜಾತಿಯ ಆಧಾರದಲ್ಲಿ ತಾರತಮ್ಯ ನಡೆಸುವುದನ್ನು ನಿಲ್ಲಿಸಬೇಕು ಎಂದು ಅವರು ಯುವಜನತೆಯಲ್ಲಿ ಮನವಿ ಮಾಡಿದರು.

“ಭಾರತ್ ಮಾತಾ ಕೀ ಜೈ ಎನ್ನುವುದೇ ರಾಷ್ಟ್ರೀಯತೆಯಲ್ಲ. ಎಲ್ಲರಿಗಾಗಿ ಜೈ ಹೋ ಎನ್ನುವುದೇ ದೇಶಭಕ್ತಿ. ಧರ್ಮ, ಜಾತಿ, ನಗರ-ಗ್ರಾಮೀಣ ಎಂದು ನೀವು ವಿಭಜಿಸುವುದಾದರೆ ನೀವು ಭಾರತ್ ಮಾತಾ ಕೀ ಜೈ ಎಂದು ಹೇಳುತ್ತಿಲ್ಲ ಎಂದರ್ಥ” ಎಂದವರು ಹೇಳಿದರು.

ದಿಲ್ಲಿ ವಿವಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ವೆಂಕಯ್ಯ ನಾಯ್ಡು, ಭ್ರಷ್ಟಾಚಾರ, ಅನಕ್ಷರತೆ, ಭಯ, ಹಸಿವುಮುಕ್ತ ‘ಹೊಸ ಭಾರತ’ದ ಬಗ್ಗೆ ಆಲೋಚಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News