ವಯನಾಡ್ ಎಂಪಿ ಪ್ರಧಾನ ಮಂತ್ರಿಯಾದರೆ ?

Update: 2019-03-24 08:52 GMT

ಹೊಸದಿಲ್ಲಿ, ಮಾ.24: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಠಿಯಿಂದ ಮತ್ತೊಮ್ಮೆ  ಕಣಕ್ಕಿಳಿಯುವುದು ಈಗಾಗಲೇ ನಿರ್ಧಾರವಾಗಿದೆ. ಇದೀಗ ಇನ್ನೊಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವರಿಗೆ ದೇಶದ ವಿವಿಧ ರಾಜ್ಯಗಳ ಪಕ್ಷದ ನಾಯಕರು ಮನವಿ ಮಾಡಿದ್ದಾರೆ.  ರಾಹುಲ್ ಗಾಂಧಿ ಅವರು ಕೇರಳದ ಕಾಂಗ್ರೆಸ್ ನಾಯಕರ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರಿಗೆ ವಯನಾಡ್ ನಿಂದ ಸ್ಪರ್ಧಿಸಲು ಪಕ್ಷದ ನಾಯಕರು ಒತ್ತಡ ಹೇರಿದ್ದಾರೆ. ಆ ಮೂಲಕ ವಯನಾಡ್ ನ ಎಂಪಿ  ಪ್ರಧಾನ ಮಂತ್ರಿಯಾಗುವುದು ಕಾಂಗ್ರೆಸ್ ನಾಯಕರ ಕನಸು. ಒಂದು ವೇಳೆ ಹೀಗಾದರೆ ಕೇರಳದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಆದರೆ ರಾಹುಲ್  ಇನ್ನೂ ತನ್ನ ನಿರ್ಧಾರ ಪ್ರಕಟಿಸಿಲ್ಲ.

ಕೇರಳದ ಇತಿಹಾಸದಲ್ಲಿ ಲೋಕಸಭಾ ಸದಸ್ಯನಿಗೆ ಈ ತನಕ ಪ್ರಧಾನ ಮಂತ್ರಿ ಹುದ್ದೆಗೇರಲು ಸಾಧ್ಯವಾಗಲಿಲ್ಲ. ಒಂದು ವೇಳೆ ರಾಹುಲ್ ಗಾಂಧಿ  ವಯನಾಡ್ ನಿಂದ ಲೋಕಸಭೆಗೆ ಆಯ್ಕೆಯಾಗಿ ಪ್ರಧಾನ ಮಂತ್ರಿ ಹುದ್ದೆಗೇರಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.  ಕೇರಳ ಪ್ರಧಾನಿ ಹುದ್ದೆಗೆ ಕೊಡುಗೆ ನೀಡದಿದ್ದರೂ. ರಾಷ್ಟ್ರಪತಿ ಹುದ್ದೆಗೆ ಇದೇ ರಾಜ್ಯದ ವ್ಯಕ್ತಿ ಒಂದೊಮ್ಮೆ ಏರಿರುವುದು ಈಗ   ಇತಿಹಾಸ.

ಕೇರಳದ ಮೂರು ಜಿಲ್ಲೆಗಳ ವ್ಯಾಪ್ತಿಗೊಳಪಟ್ಟ ವಯನಾಡ್ ಕ್ಷೇತ್ರ ಕರ್ನಾಟಕದ ಗಡಿ ಭಾಗದ ಕ್ಷೇತ್ರವಾಗಿದೆ. 10 ವರ್ಷಗಳ ಹಿಂದೆ ರೂಪುಗೊಂಡ ಈ ಕ್ಷೇತ್ರಕ್ಕೆ ಎರಡು ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಿತ್ತು.  ಎಂ.ಐ.ಶಾನವಾಸ್ 2009 ಮತ್ತು 2014ರಲ್ಲಿ ಸತತ ಎರಡು ಬಾರಿ ಲೋಕಸಭೆ ಪ್ರವೇಶಿಸಿದ್ದರು. ಈ ಬಾರಿ ರಾಹುಲ್ ಗೆ ಕ್ಷೇತ್ರವನ್ನು ತೆರವುಗೊಳಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News