ಪುಲ್ವಾಮ ಉಗ್ರ ದಾಳಿ ನಡೆದಾಗ ಮೋದಿ ಬೀಫ್ ಬಿರಿಯಾನಿ ತಿಂದು ಮಲಗಿದ್ದರೇ: ಉವೈಸಿ ಪ್ರಶ್ನೆ

Update: 2019-03-24 11:17 GMT

ಹೊಸದಿಲ್ಲಿ, ಮಾ.24: ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಎಐಎಂಐಎಂ ನಾಯಕ ಅಸಾದುದ್ದೀನ್ ಉವೈಸಿ, “ಭಯೋತ್ಪಾದಕ ದಾಳಿ ನಡೆದಾಗ ಪ್ರಧಾನಿ ಬೀಫ್ ಬಿರಿಯಾನಿ ತಿಂದು ಮಲಗಿದ್ದರೇ?” ಎಂದು ಪ್ರಶ್ನಿಸಿದ್ದಾರೆ.

“ಬಾಲಕೋಟ್ ನಲ್ಲಿ ಭಾರತೀಯ ವಾಯುಪಡೆ ಬಾಂಬ್ ಗಳನ್ನು ಹಾಕಿತು. ಇದರ ಬಗ್ಗೆ ಅಮಿತ್ ಶಾ 250 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ದಾಳಿ ನಡೆದ ಪ್ರದೇಶದಲ್ಲಿ 300 ಸೆಲ್ ಫೋನ್ ಗಳನ್ನು ಪತ್ತೆಹಚ್ಚಲಾಗಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದರು. ಬಾಲಕೋಟ್ ನಲ್ಲಿ 300 ಫೋನ್ ಗಳು ಆ್ಯಕ್ಟಿವ್ ಇತ್ತು ಎನ್ನುವುದನ್ನು ನೀವು ಪತ್ತೆ ಹಚ್ಚುತ್ತೀರಿ. ಆದರೆ ನಿಮ್ಮ ಮೂಗ ಕೆಳಗೆಯೇ ಪುಲ್ವಾಮದಲ್ಲಿ 50 ಕೆ.ಜಿ. ಆರ್ ಡಿಎಕ್ಸ್ ಹೇಗೆ ಸಾಗಿಸಲಾಯಿತು ಎಂದು ಪತ್ತೆಹಚ್ಚಲು ನಿಮಗೆ ಸಾಧ್ಯವಾಗುವುದಿಲ್ಲ. ನೀವು ಬೀಫ್ ಬಿರಿಯಾನಿ ತಿಂದು ಮಲಗಿದ್ದಿರಾ ಎಂದು ನಾನು ಪ್ರಧಾನಿ ಹಾಗು ರಾಜನಾಥ್ ಸಿಂಗ್ ರಲ್ಲಿ ಕೇಳಬಯಸುತ್ತೇನೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News