​ಮಾ.27-28: ಬಜ್ಪೆ ಪೇರ ಮಸೀದಿಯ ಸ್ವಲಾತ್ ವಾರ್ಷಿಕೋತ್ಸವ

Update: 2019-03-25 13:01 GMT

ಬಜ್ಪೆ, ಮಾ. 25: ಬಜ್ಪೆ ಪೇರ ಮುಹಿಯುದ್ದೀನ್ ಜುಮಾ ಮಸ್ಜಿದ್ ಹಾಗೂ ಶೈಖ್ ಹಾಜಿ ವಲಿಯುಲ್ಲಾ (ಖ.ಸಿ.) ದರ್ಗಾ ಶರೀಫ್ ಇದರ 8ನೇ ಸ್ವಲಾತ್ ವಾರ್ಷಿಕ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವು ಮಾ. 27 ಮತ್ತು 28ರಂದು ಮಸೀದಿ ವಠಾರದಲ್ಲಿ ಜರುಗಲಿದೆ.

ಮಾ. 27ರಂದು ರಾತ್ರಿ 8ಕ್ಕೆ ಬೊಳ್ಳೂರು ಜೆಎಂ ಖತೀಬ್ ಅಸ್ಗರ್ ಫೈಝಿ ಕಾರ್ಯಕ್ರಮ ಉದ್ಘಾಟಿಸುವರು. ಅಬ್ದುಲ್ ಕರೀಮ್ ಫೈಝಿ ಕುಂತೂರ್ (ಜೂನಿಯರ್ ನೌಶಾದ್ ಬಾಖವಿ) ಪ್ರವಚನ ನೀಡುವರು.

ಮಾ.28ರಂದು ಮಗ್ರಿದ್ ನಮಾಜಿನ ಬಳಿಕ ನಡೆಯಲಿರುವ ಸ್ವಲಾತ್ ಮಜ್ಲಿಸ್‌ನ ನೇತೃತ್ವವನ್ನು ಗುರುವಾಯನಕೆರೆ ಜುಮಾ ಮಸೀದಿಯ ಖತೀಬ್ ಅಲ್‌ಹಾಜ್ ಅಸೈಯದ್ ಅಬ್ದುರಹ್ಮಾನ್ ಸಾದಾತ್ ತಂಙಳ್ ಬಾಲಅವಿ ವಹಿಸುವರು.

ಪೇರ ಮಸೀದಿಯ ಖತೀಬ್ ಬಿ.ಕೆ.ಇಬ್ರಾಹೀಂ ಅಶ್ರಫಿ ತುರ್ಕಳಿಕೆ ಕಾರ್ಯಕ್ರಮ ಉದ್ಘಾಟಿಸುವರು. ಇಬ್ರಾಹೀಂ ಖಲೀಲ್ ಹುದವಿ ಕಾಸರಗೋಡು ಮುಖ್ಯ ಭಾಷಣ ಮಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಹಾಗು ಮಸೀದಿಯ ಅಧ್ಯಕ್ಷ ಪ್ರೊ.ಟಿ.ಎಚ್. ಇಬ್ರಾಹೀಂ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News