ಮೀನು ಮಾರಾಟ ಮಾಡಿದ್ರೆ ಜೀವನ ಸಾಗುತ್ತೆ...., ಮತ ಮಾರಾಟ ಮಾಡಿದ್ರೆ ಎಷ್ಟ್ ದಿನ ಬರುತ್ತೆ.?..

Update: 2019-03-25 15:12 GMT

ಮಲ್ಪೆ, ಮಾ. 25: ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ಇಂದು ಬೆಳಗ್ಗೆ ಕನ್ಯಾನದ ದಿ ಕನ್ಸರ್ನ್ಡ್‌ ಫಾರ್ ವರ್ಕಿಂಗ್ ಚಿಲ್ಡ್ರನ್ (ನಮ್ಮಭೂಮಿ) ಹಾಗೂ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಸಹಯೋಗದೊಂದಿಗೆ ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರರೊಂದಿಗೆ ‘ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ’ ಮತದಾರರ ಸ್ವಾಭಿಮಾನಿ ಆಂದೋಲನವನ್ನು ಹಮ್ಮಿಕೊಂಡಿತು.

‘ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ’, ‘ನನ್ನ ಮತ-ನನ್ನ ಹಕ್ಕು’ ಮುಂತಾದ ಸ್ಟಿಕ್ಕರ್‌ಗಳನ್ನು, ಬ್ಯಾಡ್ಜ್‌ಗಳನ್ನು ಹಾಗೂ ಮತದಾನದ ಮಹತ್ವವನ್ನು ಸಾರುವ ಪೋಸ್ಟರ್‌ಗಳೊಂದಿಗೆ ಮೀನುಗಾರರನ್ನು ಭೇಟಿಯಾಗಿ ಅವರಿಗೆ ಮತದಾನದ ಪಾವಿತ್ರತೆ, ಅದರ ಮಹತ್ವ ಹಾಗೂ ಮತದಾನ ಹೇಗಿರಬೇಕು ಎಂಬ ವಿಷಯದ ಕುರಿತು ಮಾಹಿತಿ ನೀಡಿ ಜಾಗೃತಿಯನ್ನು ಮೂಡಿಸಲಾಯಿತು.

ಸುಮಾರು 400ಕ್ಕೂ ಹೆಚ್ಚು ಮೀನುಗಾರರು ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ ಎನ್ನುವ ಬ್ಯಾಡ್ಜ್‌ಗಳನ್ನು ಪಡೆದು ಹೆಮ್ಮೆಯಿಂದ ಧರಿಸಿ, ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ ಎಂದರು.

ಇದರೊಂದಿಗೆ 100ಕ್ಕೂ ಅಧಿಕ ವಾಹನಗಳ ಮಾಲಕರು, ಚಾಲಕರು ಸ್ಟಿಕ್ಕರ್ ಗಳನ್ನು ಸಂತೋಷದಿಂದ ಕೇಳಿ ಪಡೆದು ತಮ್ಮ ವಾಹನಗಳಿಗೆ ಅಂಟಿಸಿ ಕೊಂಡರು. ಮೀನು ವ್ಯಾಪಾರದ ಭರಾಟೆಯಲ್ಲಿ ಮಧ್ಯೆಯೂ ಸಹ ವ್ಯಾಪಾರಸ್ಥರು, ಕೆಲಸಗಾರರು ಅಭಿಯಾನದ ಪೋಸ್ಟರ್, ಬ್ಯಾನರ್, ಪ್ಲಕಾರ್ಡ್‌ಗಳನ್ನು ಕುತೂಹಲದಿಂದ ಕಣ್ಣರಳಿಸಿ ನೊೀಡಿ ಅವುಗಳ ಕುರಿತು ವಿಚಾರಿಸಿದರು.

ಇದರೊಂದಿಗೆ 100ಕ್ಕೂ ಅಧಿಕ ವಾಹನಗಳ ಮಾಲಕರು, ಚಾಲಕರು ಸ್ಟಿಕ್ಕರ್ ಗಳನ್ನು ಸಂತೋಷದಿಂದ ಕೇಳಿ ಪಡೆದು ತಮ್ಮ ವಾಹನಗಳಿಗೆ ಅಂಟಿಸಿ ಕೊಂಡರು. ಮೀನು ವ್ಯಾಪಾರದ ರಾಟೆಯಲ್ಲಿಮ್ಯೆಯೂ ಸಹ ವ್ಯಾಪಾರಸ್ಥರು, ಕೆಲಸಗಾರರು ಅಭಿಯಾನದ ಪೋಸ್ಟರ್, ಬ್ಯಾನರ್, ಪ್ಲಕಾರ್ಡ್‌ಗಳನ್ನು ಕುತೂಹಲದಿಂದ ಕಣ್ಣರಳಿಸಿ ನೋಡಿ ಅವುಗಳ ಕುರಿತು ವಿಚಾರಿಸಿದರು. ಮೀನು ಮಾರುವ ಮಹಿಳೆಯರು, ನಾವು ಇಲ್ಲಿಯವರೆಗೂ ಹಣ ಪಡೆದು ವೋಟ್ ಮಾಡಿಲ್ಲ, ಒಮ್ಮೆಯೂ ಮತದಾನವನ್ನು ತಪ್ಪಿಸಿಕೊಂಡಿಲ್ಲ, ಈ ಬಾರಿಯೂ ಏನೇ ಕೆಲಸವಿದ್ದರೂ ಸಹ ವೋಟ್ ಮಾಡುತ್ತೇವೆ ಎಂದರಲ್ಲದೇ, ಬ್ಯಾಡ್ಜ್‌ಗಳನ್ನು ಕೇಳಿ ಪಡೆದು ಧರಿಸಿಕೊಂಡು ಎಂದಿನಂತೆ ತಮ್ಮ ಕೆಲಸದಲ್ಲಿ ಮಗ್ನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News