×
Ad

ಪಂಜಾಬ್ ವಿರುದ್ಧ ರಾಜಸ್ಥಾಥನಕ್ಕೆ 185 ರನ್ ಗುರಿ

Update: 2019-03-25 23:41 IST

ಜೈಪುರ,ಮಾ.25: ಆರಂಭಿಕ ಆಟಗಾರ ಕ್ರಿಸ್ ಗೇಲ್ ಅಬ್ಬರದ ಬ್ಯಾಟಿಂಗ್ ಬೆಂಬಲದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ನಾಲ್ಕನೇ ಐಪಿಎಲ್ ಪಂದ್ಯದಲ್ಲಿ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 184 ರನ್ ಕಲೆ ಹಾಕಿದೆ.

ಸೋಮವಾರ ಟಾಸ್ ಜಯಿಸಿದ ರಾಜಸ್ಥಾನ ನಾಯಕ ಅಜಿಂಕ್ಯ ರಹಾನೆ ಪಂಜಾಬ್‌ನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಕೆಎಲ್ ರಾಹುಲ್(4)ರನ್ನು ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಕಳೆದುಕೊಂಡ ಪಂಜಾಬ್ ಕಳಪೆ ಆರಂಭ ಪಡೆದಿತ್ತು. ಈ ಹಂತದಲ್ಲಿ ಜೊತೆಯಾದ ಗೇಲ್(79, 47 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ಮಾಯಾಂಕ್ ಅಗರ್ವಾಲ್(22, 24 ಎಸೆತ, 1 ಬೌಂಡರಿ, 2 ಸಿಕ್ಸರ್)2ನೇ ವಿಕೆಟ್‌ಗೆ 56 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

33 ಎಸೆತಗಳಲ್ಲಿ 50 ರನ್ ಪೂರೈಸಿದ ಗೇಲ್ 3ನೇ ವಿಕೆಟ್‌ಗೆ ಯುವ ದಾಂಡಿಗ ಸರ್ಫರಾಝ್ ಖಾನ್ ಅವರೊಂದಿಗೆ 84 ರನ್ ಜೊತೆಯಾಟ ನಡೆಸಿದರು. 16ನೇ ಓವರ್‌ನಲ್ಲಿ ಸ್ಟೋಕ್ಸ್ ಅವರು ಗೇಲ್ ಅಬ್ಬರಕ್ಕೆ ತೆರೆ ಎಳೆದರು.

ಔಟಾಗದೆ 46(29 ಎಸೆತ, 6 ಬೌಂಡರಿ, 1 ಸಿಕ್ಸರ್)ರನ್ ಗಳಿಸಿದ ಖಾನ್ ಪಂಜಾಬ್ ಮೊತ್ತವನ್ನು 184ಕ್ಕೆ ತಲುಪಿಸಿದರು. ರಾಜಸ್ಥಾನದ ಪರ ವೇಗದ ಬೌಲರ್ ಬೆನ್ ಸ್ಟೋಕ್ಸ್(2-48) ಎರಡು ವಿಕೆಟ್‌ಪಡೆದರು.

► ರಾಜಸ್ಥಾನ 16 ಓವರ್‌ಗಳಲ್ಲಿ 146/2

 ಗೆಲ್ಲಲು 185 ರನ್ ಗುರಿ ಪಡೆದ ರಾಜಸ್ಥಾನ ರಾಯಲ್ಸ್ ತಂಡ 16ನೇ ಓವರ್‌ನ ಅಂತ್ಯಕ್ಕೆ

146 ರನ್ ಗಳಿಸಿದ್ದು, 24 ಎಸೆತಗಳಲ್ಲಿ 39 ರನ್ ಗಳಿಸಬೇಕಾಗಿದೆ. ಸ್ಯಾಮ್ಸನ್(27) ಹಾಗೂ ಸ್ಮಿತ್(18) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇನಿಂಗ್ಸ್ ಆರಂಭಿಸಿದ ಜೋಸ್ ಬಟ್ಲರ್(69) ಹಾಗೂ ಅಜಿಂಕ್ಯ ರಹಾನೆ(27) ಮೊದಲ ವಿಕೆಟ್‌ಗೆ 78 ರನ್ ಜೊತೆಯಾಟ ನಡೆಸುವುದರೊಂದಿಗೆ ಉತ್ತಮ ಆರಂಭ ಪಡೆದಿದೆ. 8.1ನೇ ಓವರ್‌ನಲ್ಲಿ ರಹಾನೆ ಔಟಾದರು. ಆಗ ಬಟ್ಲರ್‌ಗೆ ಜೊತೆಯಾದ ಸ್ಯಾಮ್ಸನ್ 2ನೇ ವಿಕೆಟ್‌ಗೆ 30 ರನ್ ಸೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News