ಅಕ್ರಮ ಮರಳು ಸಾಗಾಟ: ಇಬ್ಬರ ಬಂಧನ

Update: 2019-03-26 17:27 GMT

ಪಡುಬಿದ್ರಿ: ಹೆಜಮಾಡಿ ಟೋಲ್‍ಗೇಟ್ ಬಳಿ ತಪಾಸಣೆ ನಡೆಸುತಿದ್ದಾಗ ಅಕ್ರಮ ಮರಳು ಸಾಗಿಸುತಿದ್ದ ವಾಹನವನ್ನು ಪತ್ತೆ ಹಚ್ಚಿರುವ ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಸೋಮವಾರ ರಾತ್ರಿ 1.30ರ ವೇಳೆಗೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಂಚರಿಸುತಿದ್ದ ಲಾರಿಯನ್ನು ತಪಾಸಣೆ ಮಾಡಿದಾಗ ಅಕ್ರಮವಾಗಿ ಮರಳನ್ನು ಸಾಗಿಸುತಿರುವುದು ಬೆಳಕಿಗೆ ಬಂತು. ಲಾರಿಯಲ್ಲಿ ಮರಳನ್ನು ತುಂಬಿ ಪ್ಲಾಸ್ಟಿಕ್ ಟ್ರೇಗಳನ್ನು ಇರಿಸಿ ಟರ್ಪಾಲ್ ಮುಚ್ಚಿ ಮರಳನ್ನು ಸಾಗಿಸಲಾ ಗುತಿತ್ತು. ಪ್ರಕರಣಕ್ಕೆ ಸಂಬಂಧಿಸಿ ಲಾರಿಯಲ್ಲಿದ್ದ ನಝೀರ್ ಮತ್ತು ಮುಹಮ್ಮದ್ ತೌಸೀಫ್ ಪೊಲೀಸರು ಬಂಧಿಸಿದ್ದಾರೆ.

ಲಾರಿಯನ್ನು ತಪಾಸಣೆ ನಡೆಸುತಿದ್ದಾಗ ಬೆಂಗಾವಲು ವಾಹನವಾಗಿ ಶಿಫ್ಟ್ ಕಾರನ್ನು ಬಳಸಲಾಗಿತ್ತು. ಕಾರಿನಲ್ಲಿ ಶಾಕೀರ್ ಮತ್ತು ರಿಯಾಝ್ ಇದ್ದರು. ಆದರೆ ತಪಾಸಣೆಯ ವೇಳೆ ಅವರಿಬ್ಬರೂ ಪರಾರಿಯಾಗಿದ್ದರು.

ಲಾರಿಯಲ್ಲಿದ್ದ 15 ಸಾವಿರ ರೂ. ಬೆಲೆಬಾಳುವ 15 ಟನ್ ತೂಕದ ಮರಳು ಹಾಗೂ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News