×
Ad

ಮನ್ನಾರ್ ಗುಡಿ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ; 7 ಸಾವು

Update: 2019-03-27 19:18 IST

ಚೆನ್ನೈ, ಮಾ.27: ತಮಿಳುನಾಡಿನ  ಮನ್ನಾರ್ ಗುಡಿಯ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ  ಆಕಸ್ಮಿಕವಾಗಿ ಬೆಂಕಿ  ಬಿದ್ದ  ಪರಿಣಾಮವಾಗಿ 7 ಮಂದಿ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ. ಸುರೇಶ್ , ಬಾಬು, ಸಿಂಗಾರವೇಲು, ಮೋಹನ್, ಹರಿವು, ವೀರಾಯನ್ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ.  ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ, 12ಕ್ಕೂ    ಅಧಿಕ ಮಂದಿ ಗಾಯಗೊಂಡು ಮನ್ನಾರಗುಡಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News