ಮುಝಫ್ಫರ್ ಗಲಭೆ: 6 ಆರೋಪಿಗಳ ಸೊತ್ತು ಮುಟ್ಟುಗೋಲಿಗೆ ನ್ಯಾಯಾಲಯ ಆದೇಶ

Update: 2019-03-27 15:46 GMT

ಮುಝಫ್ಫರ್‌ನಗರ, ಮಾ. 27: 2013ರ ಮುಝಪ್ಫರ್‌ನಗರ ಗಲಭೆ ಸಂದರ್ಭ ನಡೆದ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಮುಟ್ಟುಗೋಲು ಪ್ರಕ್ರಿಯೆ ಆರಂಭಿಸುವಂತೆ ಇಲ್ಲಿನ ಹೈಕೋರ್ಟ್ ಆದೇಶಿಸಿದೆ.

ಎಪ್ರಿಲ್ 16ರಂದು ನ್ಯಾಯಾಲಯದ ಮುಂದೆ ಶರಣಾಗತರಾಗುವಂತೆ ರವಿಂದರ್ ಪ್ರಹ್ಲಾದ್, ಬಿಷನ್ ಸಿಂಗ್, ತೆಂಡು, ದೇವೇಂದರ್ ಹಾಗೂ ಜಿತೇಂದರ್‌ಗೆ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ರಾಕೇಶ್ ಕುಮಾರ್ ಗೌತಮ್ ಮಂಗಳವಾರ ನೋಟಿಸು ಜಾರಿ ಮಾಡಿದ್ದಾರೆ. ಈ ಹಿಂದೆ ನ್ಯಾಯಾಲಯ ಅವರ ವಿರುದ್ಧ ನೋಟಿಸು ಜಾರಿ ಮಾಡಿತ್ತು. ಆದರೆ, ಆದೇಶ ಅನುಸರಿಸಲು ಅವರು ವಿಫಲರಾಗಿದ್ದರು. ಈಗ ನ್ಯಾಯಾಲಯ ಅವರ ಸೊತ್ತು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದೆ.

 ಮುಹಮ್ಮದ್ ವಸೀಮ್ ಸಲ್ಲಿಸಿದ ದೂರಿನ ಪ್ರಕಾರ, ಅವರ ಪುತ್ರ ಶಾನವಾಝ್ ಅವರನ್ನು 2013 ಆಗಸ್ಟ್ 27ರಂದು ಕವಾಲ್‌ನಲ್ಲಿ 8 ಮಂದಿ ಇರಿದು ಹತ್ಯೆಗೈದಿದ್ದರು. ಈ ಘಟನೆಯಿಂದ ಮುಝಪ್ಫರ್‌ನಗರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು ಹಾಗೂ ಸಮೀಪದ ಜಿಲ್ಲೆಗಳಲ್ಲಿ 60ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News