×
Ad

ಯುರೋ ಅರ್ಹತಾ ಟೂರ್ನಿ: ಮೊರಾಟಾ ಅವಳಿ ಗೋಲು

Update: 2019-03-27 23:52 IST

ಟಾ ಖಲಿ (ಮಾಲ್ಟಾ), ಮಾ.27: ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿದ ಅಲ್ವಾರೊ ಮೊರಾಟಾ ಅವಳಿ ಗೋಲು ಗಳಿಕೆಯ ಮೂಲಕ ಯುರೋ ಅರ್ಹತಾ ಟೂರ್ನಿಯ ಮಾಲ್ಟಾ ವಿರುದ್ಧದ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಗೆಲುವಿನ ಗುರಿ ತಲುಪಿಸಿದರು.

ಶನಿವಾರ ನಡೆದ ಪಂದ್ಯದಲ್ಲಿ ನಾರ್ವೆ ತಂಡವನ್ನು 2-1ರಿಂದ ಬಗ್ಗುಬಡಿದಿದ್ದ ಸ್ಪೇನ್, ಮಂಗಳವಾರ ಟಾ ಖಲಿ ಕ್ರೀಡಾಂಗಣದಲ್ಲಿ ಗ್ರೂಪ್ ಎಫ್ ಪಂದ್ಯದಲ್ಲಿ ಮೊರೊಟಾರ ಎರಡು ಗೋಲುಗಳ ಮೂಲಕ ಜಯಭೇರಿ ಬಾರಿಸಿತು. ಲೂಯಿಸ್ ಎನ್ರಿಕ್ ನೇತೃತ್ವದ ಸ್ಪೇನ್ ತನಗೆ ದೊರೆತ ಹಲವು ಅವಕಾಶಗಳನ್ನು ಗೋಲಾಗಿಸುವಲ್ಲಿ ವಿಫಲವಾಯಿತು. ಕಳೆದ ಆರು ಪಂದ್ಯಗಳಲ್ಲಿ ಮೊರಾಟಾ 5 ಗೋಲು ಬಾರಿಸಿದ್ದಾರೆ.

ಆದರೆ ಈ ಪಂದ್ಯಕ್ಕೆ ನಾಯಕ ಲೂಯಿಸ್ ಎನ್ರಿಕ್ ಗೈರು ಹಾಜರಾಗಿದ್ದರು. ಅವರ ಸ್ಥಾನದಲ್ಲಿ ಉಪನಾಯಕ ರಾಬರ್ಟ್ ಮೊರೆನೊ ತಂಡವನ್ನು ಮುನ್ನಡೆಸಿದರು. ಪ್ರಥಮಾರ್ಧದ ಬಳಿಕ ಕೆಲವೇ ಕ್ಷಣಗಳಲ್ಲಿ ಮೊರಾಟಾ ಅವರು ಮಾಲ್ಟಾ ಗೋಲ್‌ಕೀಪರ್ ಹೆನ್ರಿ ಬೊನೆಲ್ಲೊ ಅವರನ್ನು ವಂಚಿಸಿ ಮೊದಲ ಗೋಲು ದಾಖಲಿಸಿದರು. ಸೆರ್ಜಿಯೊ ರಾಬರ್ಟೊ ಅವರು ನೀಡಿದ ಕ್ರಾಸ್‌ನಲ್ಲಿ ಮೊರಾಟಾ ಮತ್ತೊಂದು ಗೋಲು ಗಳಿಸುವ ಅವಕಾಶವಿತ್ತು. ಆದರೆ ವೈಫಲ್ಯ ಕಾದಿತ್ತು. ಆದರೆ ಮೊರಾಟಾ ಹೆಚ್ಚು ಕಾಯಬೇಕಾಗಲಿಲ್ಲ. 73ನೇ ನಿಮಿಷದಲ್ಲಿ ಜೇಸಸ್ ನವಾಸ್ ನೀಡಿದ ಪಾಸ್‌ನ್ನು ಗೋಲಾಗಿಸಿ ಸ್ಪೇನ್ ಜಯದ ಸಂಭ್ರಮದಲ್ಲಿ ಭಾಗಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News