×
Ad

ನಮಗೆ 60 ವರ್ಷವಾಗಿಲ್ಲ: ಟೀಕಾಕಾರರ ವಿರುದ್ಧ ಬ್ರಾವೊ ವಾಗ್ದಾಳಿ

Update: 2019-03-27 23:57 IST

ಹೊಸದಿಲ್ಲಿ, ಮಾ.27: ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ ಹೆಚ್ಚಿನ ಆಟಗಾರರು 30 ವಯಸ್ಸು ಮೀರಿದವರು ಎಂಬ ವಾದಕ್ಕೆ ಅಂತ್ಯ ಹಾಡಲು ಯತ್ನಿಸುತ್ತಿರುವ ಡ್ವೇಯ್ನಿ ಬ್ರಾವೊ, ನಮಗೆ 60 ವರ್ಷ ವಯಸ್ಸಾಗಿಲ್ಲ. ನಾವು ಅನುಭವದ ಜೊತೆಗೆ ಚಿರಯುವಕರಾಗಿದ್ದೇವೆ ಎಂದು ಹೇಳಿದ್ದಾರೆ.

ಚೆನ್ನೈ ತಂಡ ರವಿವಾರ ದಿಲ್ಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಆರು ವಿಕೆಟ್‌ಗಳಿಂದ ಜಯ ಸಾಧಿಸುವುದರೊಂದಿಗೆ 12ನೇ ಆವೃತ್ತಿಯ ಐಪಿಎಲ್‌ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಪಂದ್ಯದ ಬಳಿಕದ ಪತ್ರಿಕಾಗೋಷ್ಠಿಯಲ್ಲಿ ವಯಸ್ಸಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಬ್ರಾವೊ,‘‘ನಮಗೆ ಎಷ್ಟು ವಯಸ್ಸಾಗಿದೆ ಎಂಬ ಪರಿಜ್ಞಾನವಿದೆ. ನೀವು ಗೂಗಲ್‌ನಲ್ಲಿ ಹುಡುಕಿದರೆ ಅದು ಲಭಿಸುತ್ತದೆ. ಅದು ವಿಷಯವೇ ಅಲ್ಲ. ನಮಗೆ 60 ವರ್ಷ ವಯಸ್ಸಾಗಿಲ್ಲ. ನಮಗಿನ್ನೂ 32ರಿಂದ 35 ವರ್ಷ. ನಾವು ಈಗಲೂ ಯುವಕರು. ನಾವು ಕ್ರಿಕೆಟ್‌ನಲ್ಲಿ ಸಾಕಷ್ಟು ಪಳಗಿದ್ದೇವೆ’’ ಎಂದರು.

‘‘ಯಾವುದೇ ಕ್ರೀಡೆಯಾಗಲಿ, ಟೂರ್ನಮೆಂಟ್ ಆಗಲಿ, ಅನುಭವವನ್ನು ಸೋಲಿಸಲು ಸಾಧ್ಯವಿಲ್ಲ. ನಮಗೆ ನಮ್ಮ ದೌರ್ಜಲ್ಯದ ಅರಿವಿದೆ. ನಾವು ಜಾಣತನದ ಆಟವನ್ನು ಆಡಲು ಬಯಸುತ್ತೇವೆ. ನಮ್ಮ ತಂಡವನ್ನು ವಿಶ್ವ ಶ್ರೇಷ್ಠ ನಾಯಕನೊಬ್ಬ ಮುನ್ನಡೆಸುತ್ತಿದ್ದಾರೆ. ನಮ್ಮದು ವೇಗದ ತಂಡವಲ್ಲ ಎಂದು ಅವರು(ಧೋನಿ)ನೆನಪಿಸುತ್ತಿದ್ದಾರೆ. ಆದರೆ ನಮ್ಮದು ಬುದ್ದಿವಂತ ತಂಡ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News