ಕೊಠಡಿಯಲ್ಲಿ ಕೂಡಿ ಹಾಕಿ ಬಾಲಕಿಯ ಅತ್ಯಾಚಾರ: ಓರ್ವ ಆರೋಪಿಯ ಬಂಧನ

Update: 2019-03-28 09:02 GMT

ಆನೇಕಲ್, ಮಾ.28: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ರಾತ್ರಿಯಿಡೀ ಕೊಠಡಿಯಲ್ಲಿ ಕೂಡಿಹಾಕಿ ಬೆದರಿಸಿ ಅತ್ಯಾಚಾರಗೈದ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅರುಣ್ ಬಂಧಿತ ಆರೋಪಿ. ಇನ್ನೋರ್ವ ಆರೋಪಿ ಕೆಂದ ಎಂಬಾತ ಪರಾರಿಯಾಗಿದ್ದಾನೆ.

ಘಟನೆ ವಿವರ: ಹದಿನೈದು ವರ್ಷದ ಬಾಲಕಿಯನ್ನು ಇಬ್ಬರು ಆಮಿಷವೊಡ್ಡಿ, ಬೆದರಿಸಿ ಕೊಠಡಿಗೆ ಕರೆದೊಯ್ದು ಕೂಡಿ ಹಾಕಿದ್ದರೆನ್ನಲಾಗಿದೆ. ತಡರಾತ್ರಿಯವರೆಗೂ ಬಾಲಕಿಯ ಪೋಷಕರು ಮಗಳಿಗಾಗಿ ಹುಡುಕಾಡಿದ್ದಾರೆ. ಈ ನಡುವೆ ಅಲ್ಲೇ ಇದ್ದ ಆರೋಪಿಗಳು ಏನೂ ಅರಿಯದಂತೆ ನಾಟಕವಾಡಿದ್ದರು. ತಡರಾತ್ರಿ ನಂತರ ಇಬ್ಬರು ಯುವಕರು ಬೆಳಗ್ಗೆ ಐದರ ತನಕ ಬಾಲಕಿಯೊಡನೆ ಇದ್ದು ಕೃತ್ಯವೆಸಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

 ಬೆಳಗಿನ ಜಾವ ಬಾಲಕಿ ಮನೆಗೆ ಹಿಂದಿರುಗಿದಾಗ ಪ್ರಕರಣ ಬೆಳಕಿಗೆ ಬಂದಿದೆ.

 ಈ ಬಗ್ಗೆ ಬಾಲಕಿಯ ಪೋಷಕರು ನೀಡಿದ ದೂರಿನನ್ವಯ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳ ವಿರುದ್ಧ ಬಾಲಕಿಯಿಂದ ಹೇಳಿಕೆ ಪಡೆದು ಪೊಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News