ರಾಷ್ಟ್ರೀಯ ಭದ್ರತೆ ಕುರಿತ ವರದಿಯನ್ನು ರಾಹುಲ್‌ಗೆ ಸಲ್ಲಿಸಿದ ಸರ್ಜಿಕಲ್ ಸ್ಟ್ರೈಕ್ ಹೀರೊ ಹೂಡಾ
Update: 2019-03-31 20:50 IST
ಹೊಸದಿಲ್ಲಿ,ಮಾ.31: ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ನಡೆದಿದ್ದ ಸರ್ಜಿಕಲ್ ದಾಳಿಗಳ ರೂವಾರಿ ಲೆ.ಜ.(ನಿವೃತ್ತ) ಡಿ.ಎಸ್.ಹೂಡಾ ಅವರು ರಾಷ್ಟ್ರೀಯ ಭದ್ರತೆ ಕುರಿತು ವರದಿಯೊಂದನ್ನು ರವಿವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಸಲ್ಲಿಸಿದರು.
ಕಳೆದ ಫೆಬ್ರವರಿಯಲ್ಲಿ ಹೂಡಾ ನೇತೃತ್ವದಲ್ಲಿ ಕಾರ್ಯಪಡೆಯೊಂದನ್ನು ರಚಿಸಿದ್ದ ರಾಹುಲ್ ರಾಷ್ಟ್ರೀಯ ಭದ್ರತೆ ಕುರಿತು ವರದಿಯನ್ನು ತಯಾರಿಸುವ ಹೊಣೆಗಾರಿಕೆಯನ್ನು ವಹಿಸಿದ್ದರು. ಸಮಿತಿಯು ಆಯ್ದ ತಜ್ಞರ ತಂಡಗಳೊಂದಿಗೆ ಸಮಾಲೋಚಿಸಿ ಈ ವರದಿಯನ್ನು ಸಿದ್ಧಗೊಳಿಸಿದೆ.
ಭಾರತದ ರಾಷ್ಟ್ರೀಯ ಭದ್ರತೆ ಕುರಿತು ವರದಿಯನ್ನು ಹೂಡಾ ಅವರು ತನಗೆ ಸಲ್ಲಿಸಿದ್ದು,ಈ ವರದಿಯನ್ನು ಮೊದಲು ಪಕ್ಷದೊಳಗೆ ಚರ್ಚಿಸಲಾಗುವುದು ಎಂದು ರಾಹುಲ್ ಟ್ವೀಟಿಸಿದ್ದಾರೆ.