ರಘುರಾಮ್ ರಾಜನ್ ಪ್ರಕಾರ ಈ ಕಾರಣಕ್ಕಾಗಿ ಆರೆಸ್ಸೆಸ್ ದೇಶಕ್ಕೆ ಮಾರಕ…

Update: 2019-03-31 15:59 GMT

ಹೊಸದಿಲ್ಲಿ,ಮಾ.31: ಭಾರತದಂತಹ ಮುಕ್ತ ಪ್ರಜಾಸತ್ತಾತ್ಮಕ ದೇಶಕ್ಕೆ ಸಂಘಪರಿವಾರ ಮಾರಕವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್ ‘ದಿ ವೀಕ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಿಸಿದ್ದಾರೆ.

ನೆಹರೂ ಮತ್ತು ಗಾಂಧೀಜಿಯ ದೃಷ್ಟಿಕೋನ ಹಾಗೂ ಸಂವಿಧಾನದ ಆಧಾರದಲ್ಲಿ ನಿರ್ಮಿಸಲಾಗಿರುವ ಭಾರತಕ್ಕೆ ಸಂಘಪರಿವಾರದ ಸಂಕೀರ್ಣ ದೃಷ್ಟಿಕೋನ ಅಸಮಂಜಸವಾಗಿದೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಘಪರಿವಾರ, ಭಾರತೀಯ ಜೀವನ ಪದ್ಧತಿಯ ವಿಶಾಲವಾದ ವೇದಿಕೆಯಲ್ಲಿ ಪಾಲ್ಗೊಳ್ಳಲು ಬಹುತ್ವ ಸಮುದಾಯದ ಹೊರಗಿನ ಸಮುದಾಯಗಳಿಗೆ ಮಯತ್ತು ಬಹುತ್ವ ಸಮುದಾಯದ ಒಳಗಿನ ಕೆಲವು ಸಮುದಾಯಗಳಿಗೆ ಮುಕ್ತ ಅವಕಾಶ ನೀಡುವುದಿಲ್ಲ ಎಂದು ರಾಜನ್ ಅಭಿಪ್ರಾಯಿಸಿದ್ದಾರೆ.

ಈ ಕಾರಣದಿಂದ ಸಂಘಪರಿವಾರ ಭಾರತದಂತಹ ಮುಕ್ತ ಪ್ರಜಾಸತಾತ್ಮಕ ದೇಶಕ್ಕೆ ಸಂಘಪರಿವಾರ ಮಾರಕವಾಗಿದೆ ಮತ್ತು ಆರ್‌ಎಸ್‌ಎಸ್‌ನ ಸಾಂಸ್ಥಿಕ ಉದ್ದೇಶಕ್ಕೆ ನನ್ನ ವಿರೋಧವಿದೆ ಎಂದು ರಘುರಾಮ್ ರಾಜನ್ ದಿ ವೀಕ್‌ಗೆ ತಿಳಿಸಿದ್ದಾರೆ.

ಪಕ್ಷ ಈಗಾಗಲೇ ಘೋಷಿಸಿರುವ ಕನಿಷ್ಟ ಆದಾಯ ಯೋಜನೆಯನ್ನು ರೂಪಿಸಲು ಕಾಂಗ್ರೆಸ್ ಅರ್ಥಶಾಸ್ತ್ರ ಜ್ಞ ರಘುರಾಮ್ ರಾಜನ್ ಅವರ ನೆರವನ್ನು ಕೋರಿತ್ತು ಎಂದು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ನೀಡುವ ಮೂಲಕ ರಾಜನ್ ಮತ್ತೆ ಪತ್ರಿಕೆಗಳ ಮುಖಪುಟದಲ್ಲಿ ಕಾಣಿಸಿಕೊಂಡಿದ್ದರು. ಚುನಾವಣೆಯ ನಂತರ ಮೈತ್ರಿಕೂಟ ಸರಕಾರ ರಚನೆಯಾದರೆ ರಘುರಾಮ್ ರಾಜನ್ ವಿತ್ತ ಸಚಿವ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 2013ರ ಸೆಪ್ಟೆಂಬರ್‌ನಿಂದ 2016ರ ಸೆಪ್ಟೆಂಬರ್‌ವರೆಗೆ ರಾಜನ್ ಭಾರತೀಯ ರಿಸರ್ವ್ ಬ್ಯಾಂಕ್‌ನ 23ನೇ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News