ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕಿಂಗ್: ಕೊನೆಯ ದಿನಾಂಕ ವಿಸ್ತರಣೆ

Update: 2019-03-31 17:21 GMT

ಹೊಸದಿಲ್ಲಿ,ಮಾ.31: ಸರಕಾರವು ಆಧಾರ್ ಮತ್ತು ಪಾನ್ ಜೋಡಣೆಗೆ ಅಂತಿಮ ಗಡುವನ್ನು 2019,ಸೆ.30ರವರೆಗೆ ವಿಸ್ತರಿಸಿದೆ.

ಆದರೆ ನಿರ್ದಿಷ್ಟವಾಗಿ ವಿನಾಯತಿ ಹೊಂದಿರದಿದ್ದರೆ 2019,ಎ.1ರಿಂದ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ಆಧಾರ್ ಸಂಖ್ಯೆಯ ಉಲ್ಲೇಖ ಮತ್ತು ಜೋಡಣೆ ಕಡ್ಡಾಯವಾಗಿದೆ ಎಂದು ರವಿವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

2019,ಮಾ.31ರೊಳಗೆ ಆಧಾರ್‌ನೊಂದಿಗ ಜೋಡಣೆಯಾಗಿರದ ಪಾನ್ ಸಂಖ್ಯೆಗಳು ಅಸಿಂಧುಗೊಳ್ಳಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಸರಕಾರದ ಈ ಹೇಳಿಕೆ ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News